ಜೈಪುರ: ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್ ಮಾದರಿಯ ವಸ್ತು ಪತ್ತೆಯಾಗಿದೆ.
ಅನೂಪಗಢ ಪ್ರದೇಶದಲ್ಲಿ ಗ್ರಾಮಸ್ಥರು ಇಂದು ಬೆಳಿಗ್ಗೆ ಮಾನವರಹಿತ ವೈಮಾನಿಕ ವಾಹನವನ್ನು ಪತ್ತೆ ಮಾಡಿದ್ದರು. ಬಳಿಕ ಈ ಬಗ್ಗೆ ಸ್ಟೇಷನ್ ಹೌಸ್ ಆಫೀಸ್ ಗೆ ಮಾಹಿತಿ ನೀದಿದ್ದಾರೆ. ಅವರು ತಕ್ಷಣ ಗಡಿ ಭದ್ರತಾ ಪಡೆಗೆ ಮಾಹಿತಿ ರವಾನಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಬಿಎಸ್ ಎಫ್, ಡ್ರೋನ್ ವಶಕ್ಕೆ ಪಡೆದಿದೆ. ಡ್ರೋನ್ 5ರಿಂದ 7 ಅಡಿ ಉದ್ದವಿದ್ದು ಬಹುತೇಕ ಹಾನಿಯಾಗಿದೆ. ಅದರ ಕ್ಯಾಮರಾ ಮಾಡ್ಯೂಲರ್ ಮುರಿದಿವೆ. ಸದ್ಯ ಡ್ರೋನ್ ಉದ್ದೇಶವನ್ನು ನಿರ್ಧರಿಸಲು ವಿಧಿವಿಜ್ಞಾನ ಮತ್ತು ತಾಂತ್ರಿಕ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.