ಬೆಂಗಳೂರು: ಕಳ್ಳತನ ಮಾಡಲು ಖದೀಮರು ಏನೆಲ್ಲ ಖತರ್ನಾಕ್ ಐಡಿಯಾಗಳನ್ನು ಮಾಡುತ್ತಾರೆ…ಇಲ್ಲೋರ್ವ ಕಳ್ಳ ಬೆತ್ತಲಾಗಿ ಬಂದು ಗೋಡೆ ಕೊರೆದು ಕಳ್ಳತನ ಮಾಡುರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಕಳ್ಳನೊಬ್ಬ ಮುಖಕ್ಕೆ ಮಸ್ಕ್ ಧರಿಸಿ, ಬೆತ್ತಲಾಗಿ ಬಂದು ಗ್ಡೆ ಕೊರೆದು ಮೊಬೈಲ್ ಅಂಗಡಿಯೊಳಗೆ ನುಗ್ಗಿ 85 ಮೊಬೈಲ್ ಗಳನ್ನು ಕದ್ದು ಪರಾರಿಯಾಗಿದ್ದಾನೆ.
ದಿನೇಶ್ ಎಂಬುವವರ ಹನುಮಾನ್ ಟೆಲಿಕಾಂ ಮೊಬೈಲ್ ಶಾಪ್ ನಲ್ಲಿ ಈ ಘಟನೆ ನಡೆದಿದೆ. ಹಲವು ಪ್ರಕರಣಗಳಲ್ಲಿ ಪೊಲೀಸರು ಆರೋಪಿ ಪತ್ತೆಗೆ ಬಟ್ಟೆಯ ಜಾಡು ಹಿಡಿಯುತ್ತಾರೆ. ಹಾಗಾಗಿ ಪೊಲೀಸರನ್ನೇ ಯಾಮಾರಿಸಲು ಈ ಕಳ್ಳ ಬೆತ್ತಲಾಗಿ ಬಂದು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾನೆ.
ಕಳ್ಳನ ಕೈಚಳಕ ಮೊಬೈಲ್ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.