ಈ ಬಾರಿ ಮುಂಗಾರು ಬೇಗನೆ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯ ದಕ್ಷಿಣ ಭಾಗ ಮತ್ತು ನಿಕೋಬಾರ್ ದ್ವೀಪಗಳನ್ನು ಮುಂಗಾರು ಪ್ರವೇಶಿಸಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಇದು ಮತ್ತಷ್ಟು ಮುಂದುವರಿಯುವ ಸಾಧ್ಯತೆ ಇದೆ. ಮೇ 27 ರ ಸುಮಾರಿಗೆ ಮುಂಗಾರು ಕೇರಳವನ್ನು ತಲುಪುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ ಮೇ ತಿಂಗಳಲ್ಲೇ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನದ ವೈಖರಿ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಈ ಮಧ್ಯೆ, ಹವಾಮಾನ ಇಲಾಖೆ ಮುಂಗಾರು ಕುರಿತು ಹೊಸ ಅಪ್ಡೇಟ್ ಬಿಡುಗಡೆ ಮಾಡಿದೆ. ನೈಋತ್ಯ ಮುಂಗಾರು ಮಂಗಳವಾರ ಬಂಗಾಳ ಕೊಲ್ಲಿಯ ದಕ್ಷಿಣ ಭಾಗ, ಅಂಡಮಾನ್ ಸಮುದ್ರದ ದಕ್ಷಿಣ ಭಾಗ, ನಿಕೋಬಾರ್ ದ್ವೀಪಗಳು ಮತ್ತು ಅಂಡಮಾನ್ ಸಮುದ್ರದ ಉತ್ತರ ಭಾಗದ ಕೆಲವು ಪ್ರದೇಶಗಳನ್ನು ತಲುಪಿದೆ.
ಕಳೆದ ಎರಡು ದಿನಗಳಲ್ಲಿ ನಿಕೋಬಾರ್ ದ್ವೀಪಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ದಕ್ಷಿಣ ಅರೇಬಿಯನ್ ಸಮುದ್ರದ ಬಹುತೇಕ ಭಾಗಗಳು, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶ, ಬಂಗಾಳ ಕೊಲ್ಲಿಯ ದಕ್ಷಿಣದ ಬಹುತೇಕ ಭಾಗಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಉಳಿದ ಅಂಡಮಾನ್ ಸಮುದ್ರ ಮತ್ತು ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಮುಂಗಾರು ಮುಂದುವರಿಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹೆಚ್ಚಿನ ವೇಗದಲ್ಲಿ ಬೀಸಲಿದೆ ಗಾಳಿ
ಬಂಗಾಳ ಕೊಲ್ಲಿಯ ದಕ್ಷಿಣ ಭಾಗ, ನಿಕೋಬಾರ್ ದ್ವೀಪಗಳು ಮತ್ತು ಅಂಡಮಾನ್ ಸಮುದ್ರದ ಮೇಲೆ ಪಶ್ಚಿಮ ಮಾರುತಗಳ ಪ್ರಭಾವ ಹೆಚ್ಚಾಗಿದೆ. ಸಮುದ್ರ ಮಟ್ಟದಿಂದ 1/5 ಕಿಲೋಮೀಟರ್ ಎತ್ತರದಲ್ಲಿ ಗಾಳಿಯ ವೇಗ 20 ನಾಟ್ಗಳನ್ನು ಮೀರಿದೆ ಮತ್ತು ಕೆಲವು ಪ್ರದೇಶಗಳಲ್ಲಿ ಇದು 4.5 ಕಿಲೋಮೀಟರ್ಗೆ ಹೆಚ್ಚಾಗಿದೆ.
ಹವಾಮಾನ ಇಲಾಖೆ ಹೇಳಿದ್ದೇನು ?
ಈ ಪ್ರದೇಶದಲ್ಲಿ ‘ಹೊರಹೋಗುವ ದೀರ್ಘ ತರಂಗಾಂತರ ವಿಕಿರಣ’ (OLR) ಸಹ ಕಡಿಮೆಯಾಗಿದೆ, ಇದು ಮೋಡ ಕವಿದ ವಾತಾವರಣದ ಸೂಚಕವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. OLR ಭೂಮಿಯಿಂದ ಬಾಹ್ಯಾಕಾಶಕ್ಕೆ ಹೊರಸೂಸುವ ಶಕ್ತಿಯ ಅಳತೆಯಾಗಿದೆ, ವಿಶೇಷವಾಗಿ ದೀರ್ಘ ತರಂಗಾಂತರಗಳಲ್ಲಿ (ಅತಿಗೆಂಪು). ಇದು ಭೂಮಿಯ ಮೇಲ್ಮೈ ಮತ್ತು ವಾತಾವರಣದಿಂದ ಹೊರಸೂಸಲ್ಪಡುತ್ತದೆ. ಈ ಪರಿಸ್ಥಿತಿಗಳು ಈ ಪ್ರದೇಶದಲ್ಲಿ ಮುಂಗಾರು ಆಗಮನವನ್ನು ಸೂಚಿಸುತ್ತವೆ ಎಂದು ಹವಾಮಾನ ಇಲಾಖೆ ಹೇಳಿದೆ.
About Advance of Southwest 2025 on 13th May 2025:
— India Meteorological Department (@Indiametdept) May 13, 2025
1) Widespread moderate rainfall with heavy rainfall at a few places occurred over the Nicobar Islands during past 24 hours. Thus, the widespread rainfall with isolated/scattered heavy rainfall continued over the Nicobar Islands… pic.twitter.com/JyabwSPGIc
