ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ ಉಗ್ರರ ವಿರುದ್ಧ ಎನ್ ಕೌಂಟರ್ ಕಾರ್ಯಾಚರಣೆ ಮುಂದುವರೆಸಿದೆ. ಪಹಲ್ಗಾಮ್ ದಾಳಿಯ ಉಗ್ರರ ಬೆನ್ನಟ್ಟಿರುವ ಭಾರತೀಯ ಸೇನೆ ಭಯೋತ್ಪಾದಕರನ್ನು ಹುಡುಕಿ ಹುಡುಕಿ ಹೊಡೆದುರುಳಿಸುತ್ತಿದೆ.
ಜಮ್ಮು-ಕಾಶ್ಮೀರದ ಆವಂತಿಪೋರಾ ದಟ್ಟಾರಣ್ಯದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ವಿರುದ್ಧ ಗುಂಡಿನ ಚಕಮಕಿ ನಡೆದಿದೆ. ಮತ್ತೊಂದೆಡೆ ಪುಲ್ವಾಮಾ, ಪಹಲ್ಗಾಮ್ ಪ್ರದೇಶಗಳನ್ನು ಸುತ್ತುವರೆದಿರುವ ಭಾರತೀಯ ಸೇನೆ ಉಗ್ರರ ವಿರುದ್ಧ ಎನ್ ಕೌಂಟರ್ ಕಾರ್ಯಾಚರಣೆ ಚುರುಕುಗೊಳಿಸಿದೆ.
ಪಹಲ್ಗಾಮ್ ದಾಳಿಕೋರರ ಬೆನ್ನಟ್ಟಿರುವ ಭಾರತೀಯ ಸೇನೆ ಹಿಟ್ ಲಿಸ್ಟ್ ನಲ್ಲಿದ್ದ 14 ಉಗ್ರರ ಪೈಕಿ 6 ಉಗ್ರರನ್ನು ಹೊಡೆದುರುಳಿಸಿದೆ. ಇಂದು ಬೆಳಿಗ್ಗೆ ಪುಲ್ವಾಮದ ಟ್ರಾಲ್ ಬಳಿ ಮೂವರು ಉಗ್ರರು ಭಾರತೀಯ ಸೇನೆ ಗುಂಡೇಟಿಗೆ ಬಲಿಯಾಗಿದ್ದಾರೆ. ಮೂವರು ಜೈಶ್ ಸಂಘಟನೆಯ ಮೂವರು ಉಗ್ರರು ಎಂದು ತಿಳಿದುಬಂದಿದೆ.
ಮೇ 13ರಂದು ಲಷ್ಕರ್ ಸಂಘಟನೆಯ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಈ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಎರಡು ದಿನಗಳಲ್ಲಿ ಒಟ್ಟು 6 ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.