BIG NEWS : ‘ರಾಜ್ಯ ಸರ್ಕಾರಿ’ ನೌಕರರಿಗೆ ವಿಶೇಷ ವೇತನ ಬಡ್ತಿ ಮಂಜೂರಾತಿ : ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಕುಟುಂಬ ಯೋಜನಾ ಕ್ರಮಗಳನ್ನು ಅನುಸರಿಸುವ ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ರಾಜ್ಯ ವೇತನ ಶ್ರೇಣಿಗಳನ್ವಯ ವಿಶೇಷ ವೇತನ ಬಡ್ತಿ ಮಂಜೂರಾತಿ ಕುರಿತು ಸರ್ಕಾರ ಸ್ಪಷ್ಟೀಕರಣ ನೀಡಿದೆ.

7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಜಾರಿಗೆ ಬಂದಿರುವ ಪರಿಷ್ಕೃತ ರಾಜ್ಯ ವೇತನ ಶ್ರೇಣಿಗಳ ಆರ್ಥಿಕ ಸೌಲಭ್ಯವು ದಿನಾಂಕ:1.8.2024 ರಿಂದ ಲಭ್ಯವಾಗುತ್ತದೆ. ಈ ವೇತನ ಶ್ರೇಣಿಗಳಲ್ಲಿ ವೇತನ ನಿಗಧಿಕರಣವನ್ನು ໖:1.7.2022 , 2:1.7.2022 505 31.7.2024 ವಕಾಶವಿರುವ ರವರೆಗಿನ ಅವಧಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿನ ವೇತನ ನಿಗಧಿಯಿಂದಾಗಿ ಅಥವಾ ಪುನರ್ನಿಗಧಿಯಿಂದಾಗಿ ವೇತನ ಮತ್ತು ಭತ್ಯೆಗಳನ್ನು ಮತ್ತು ನಿವೃತ್ತಿ ವೇತನದ ಹೆಚ್ಚಳಕ್ಕೆ ಯಾವುದೇ ಸರ್ಕಾರಿ ನೌಕರನು ಅರ್ಹನಾಗಿರುವುದಿಲ್ಲ.

ಈ ಹಿನ್ನೆಲೆಯಲ್ಲಿ ದಿನಾಂಕ:1.7.2022 ರಿಂದ 31.7.2024ರ ಅವಧಿಯಲ್ಲಿ ಮಿತ ಕುಟುಂಬ ಯೋಜನಾ ಕ್ರಮವನ್ನು ಅಳವಡಿಸಿಕೊಂಡ ಪ್ರಕರಣಗಳಲ್ಲಿ ವೈಯಕ್ತಿಕ ವೇತನ ರೂಪದಲ್ಲಿ ನೀಡಲಾಗುವ ವಿಶೇಷ ವೇತನ ಬಡ್ತಿಯನ್ನು 2024ರ ರಾಜ್ಯ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಲಭ್ಯವಾಗುವ ವಾರ್ಷಿಕ ವೇತನದ ಬಡ್ತಿಯ ದರದಲ್ಲಿ ದಿನಾಂಕ:1.7.2022 ರಿಂದ ಜಾರಿಗೆ ಬರುವಂತೆ ಕಾಲ್ಪನಿಕವಾಗಿ ನೀಡತಕ್ಕದಾಗಿರುತ್ತದೆ. ದಿನಾಂಕ:1.7.2022 ರಿಂದ 31.7.2024 ರವರೆಗಿನ ಅವಧಿಗೆ ಪರಿಷ್ಕೃತ ಶ್ರೇಣಿಯಲ್ಲಿನ ವಿಶೇಷ ವೇತನ ಬಡ್ತಿ ಮಂಜೂರಾತಿಯಿಂದ ಉಂಟಾದ ಆರ್ಥಿಕ ಹೆಚ್ಚಳಕ್ಕೆ ಸರ್ಕಾರಿ ನೌಕರರು ಅರ್ಹರಾಗಿರುವುದಿಲ್ಲ. ಈ ಅವಧಿಯಲ್ಲಿ ಪರಿಷ್ಕರಣೆಯ ಪೂರ್ವದ ವೇತನ ಶ್ರೇಣಿಯಲ್ಲಿ ನಿಗದಿಪಡಿಸಿದ ವೇತನ ಬಡ್ತಿಯಂತೆ ಆರ್ಥಿಕ ಲಾಭವನ್ನು ಪಡೆಯಲು ಸರ್ಕಾರಿ ನೌಕರರು ಅರ್ಹರಿರುತ್ತಾರೆ. ಆದರೆ, ಈ ಯೋಜನೆಯಲ್ಲಿ ಮಂಜೂರು ಮಾಡುವ ವೈಯಕ್ತಿಕ ವೇತನ ಬಡ್ತಿ ದರದ ಆರ್ಥಿಕ ಸೌಲಭ್ಯವು ದಿನಾಂಕ:1.8.2024 ರಿಂದ ಲಭ್ಯವಾಗುತ್ತದೆ. ಉಳಿದಂತೆ ಈ ಸೌಲಭ್ಯ ಪಡೆಯುವ ನೌಕರರು ದಿನಾಂಕ:1.10.1985ರ ಸರ್ಕಾರಿ ಆದೇಶ ಸಂಖ್ಯೆ: ಆಇ 27 ಎಸ್ಆರ್ಎಸ್ 1985 ಹಾಗೂ ಈ ಸಂಬಂಧ ಕಾಲಕಾಲಕ್ಕೆ ಹೊರಡಿಸಿರುವ ಆದೇಶ/ಸುತ್ತೋಲೆ/ಸೇರ್ಪಡೆ ಆದೇಶ ಮುಂತಾದವುಗಳಲ್ಲಿ ನಿಗಧಿಪಡಿಸಿರುವ ಎಲ್ಲಾ ಷರತ್ತು ಮಾರ್ಗಸೂಚಿಗಳನ್ನು ಪೂರೈಸಿರಬೇಕೆಂಬುದನ್ನು ಈ ಮೂಲಕ ಸ್ಪಷ್ಟಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read