ಗಮನಿಸಿ :   ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಾತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ತರಬೇತಿಗೆ ಸಹಕಾರ ಸಂಸ್ಥೆ ಸಿಬ್ಬಂದಿಗಳಿಂದ ಹಾಗೂ ಖಾಸಗಿ/ಎಸ್.ಸಿ. ಮತ್ತು ಎಸ್.ಟಿ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶಿವಮೊಗ್ಗ ಕೆ.ಐ.ಸಿ.ಎಂ. ತರಬೇತಿ ಸಂಸ್ಥೆಯ ಮೂಲಕ 6 ತಿಂಗಳ ಅವಧಿಯ ರೆಗ್ಯುಲರ್ ಮತ್ತು ದೂರ ಶಿಕ್ಷಣ ಡಿ.ಸಿ.ಎಂ ತರಬೇತಿಯನ್ನು ನೀಡಲಾಗುತ್ತದೆ. ಸಹಕಾರ ಸಂಘ/ಬ್ಯಾAಕ್ ಗಳ ನೇಮಕಾತಿಗೆ ಆದ್ಯತೆ, ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕ ಹಾಗೂ ಕÀಂಪ್ಯೂಟರ್ ತರಬೇತಿಯನ್ನು ನೀಡಲ್ಲಿದ್ದು, ಎಸ್.ಎಸ್.ಎಲ್.ಸಿ. ಉತ್ತಿರ್ಣರಾದ ಹಾಗೂ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

ದೂರ ಶಿಕ್ಷಣ ಡಿ.ಸಿ.ಎಂ ತರಬೇತಿಗೆ ಸಹಕಾರ ಸಂಘ ಸಂಸ್ಥೆಗಳ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶವಿದ್ದು ಕೇವಲ 10 ದಿನಗಳ ಸಂಪರ್ಕ ತರಗತಿಗಳನ್ನು ನಡೆಸಲಾಗುತ್ತದೆ. ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ರೂ.600 ಹಾಗೂ ಇತರೆ ಅಭ್ಯರ್ಥಿಗಳಿಗೆ ರೂ.500 ಶಿಷ್ಯವೇತನ ನೀಡಲಿದ್ದು, ಮೇ 31 ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್, ವಿನೋಬನಗರ ಶಿವಮೊಗ್ಗ 577204 ಇಲ್ಲಿ ಪಡೆಯಬೇಕು ಅಥವಾ www.kscfdcm.co.in ಮೂಲಕ ಆನ್ಲೈನ್ ಪ್ರವೇಶಾತಿಯನ್ನು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08182-248873, 7022429440 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ನ ಪ್ರಾಂಶುಪಾಲರಾದ ರವಿ. ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read