ಬಾಗಲಕೋಟೆ: ಒಡೆದ ಬಿಯರ್ ಬಾಟಲಿಯಿಂದ ಶಿಕ್ಷಕನಿಗೆ ಯುವಕ ಇರಿದ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ.
ಕ್ರಿಕೆಟ್ ಬಾಲ್ ವಿಚಾರಕ್ಕೆ ಜಗಳ ತೆಗೆದು ಯುವಕ ಪವನ್ ಜಾಧವ್ ಶಿಕ್ಷಕ ರಾಮಪ್ಪ ಪೂಜಾರಿ ಅವರಿಗೆ ಇರಿದಿದ್ದಾನೆ. ಖಾಸಗಿ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕ ರಾಮಪ್ಪ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ರಿಕೆಟ್ ಆಡುವಾಗ ಚೆಂಡು ಶಿಕ್ಷಕನ ಮನೆಯಲ್ಲಿ ಬಿದ್ದಿತ್ತು. ಮನೆಯಲ್ಲಿ ಬಾಲ್ ಹೋಗಿದೆ ಕೊಡಿ ಎಂದು ಪವನ್ ಕೇಳಿದ್ದ. ಇಲ್ಲಿ ಬಾಲ್ ಬಂದಿಲ್ಲ ಎಂದಿದ್ದಕ್ಕೆ ಶಿಕ್ಷಕನೊಂದಿಗೆ ಜಗಳವಾಗಿ ನಂತರ ಶಾಲೆಗೆ ಹೋಗಿ ಒಡೆದ ಬಿಯರ್ ಬಾಟಲ್ ನಿಂದ ಪವನ್ ಇರದಿದ್ದಾನೆ ಶಿಕ್ಷಕ ರಾಮಪ್ಪ ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನನ್ನು ಸಾವಳಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.