ಡಿಜಿಟಲ್ ಡೆಸ್ಕ್ : ಆಪರೇಷನ್ ಸಿಂಧೂರ್’ ದಾಳಿಗೆ ಬಲಿಯಾದ ಉಗ್ರ ಮಸೂದ್ ಕುಟುಂಬಕ್ಕೆ ಪಾಕ್ ಸರ್ಕಾರ 14 ಕೋಟಿ ಪರಿಹಾರ ನೀಡಿದೆ ಎಂದು ಮೂಲಗಳು ತಿಳಿಸಿದೆ.
ದಾಳಿಯಲ್ಲಿ ಮೃತಪಟ್ಟ ಉಗ್ರರ ಕುಟುಂಬಕ್ಕೆ ತಲಾ 1ಕೋಟಿ ಪರಿಹಾರವನ್ನು ಪಾಕಿಸ್ತಾನ ಸರ್ಕಾರ ನೀಡಿದೆ. ಪಾಕ್ ಸರ್ಕಾರ ಐಎಮ್ಎಫ್ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಗೂ ಉಗ್ರ ಮಸೂದ್ ಅಜರ್ ಮನೆ ನಿರ್ಮಾಣಕ್ಕೆ ಪಾಪಿ ಪಾಕಿಸ್ತಾನ ನೆರವು ನೀಡುತ್ತಿದೆ. ಈ ಮೂಲಕ ಪಾಕಿಸ್ತಾನದ ಮತ್ತೊಂದು ಅಸಲಿ ಮುಖ ಬಯಲಾಗಿದೆ.
ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ದಾಳಿಗೆ ಉಗ್ರ ಮಸೂದ್ ಕುಟುಂಬದ 10 ಮಂದಿ ಸೇರಿ ಒಟ್ಟು 14 ಮಂದಿ ಬಲಿಯಾಗಿದ್ದಾರೆ. ಮಸೂದ್ ಅಝರ್ ಸಹೋದರ , ಸಹೋದರಿ ಸೇರಿ 14 ಮಂದಿ ಬಲಿಯಾಗಿದ್ದರು.
ಭಾರತೀಯ ಸೇನೆ ದಾಳಿಗೆ ನನ್ನ ಕುಟುಂಬದ ಎಲ್ಲರೂ ಬಲಿಯಾಗಿದ್ದಾರೆ. ನನ್ನ ಕುಟುಂಬವೇ ನಾಶವಾಗಿದೆ. ದಾಳಿಯಲ್ಲಿ ನಾನು ಸತ್ತರೆ ಚೆನ್ನಾಗಿರುತ್ತಿತ್ತು,ನಾನು ಯಾರನ್ನೂ ಸುಮ್ಮನೆ ಬಿಡಲ್ಲ ಎಂದು ಉಗ್ರ ಮಸೂದ್ ಹೇಳಿದ್ದನು
You Might Also Like
TAGGED:ಆಪರೇಷನ್ ಸಿಂಧೂರ್’