ಬೆಂಗಳೂರು : ರಾಜ್ಯ ಸರ್ಕಾರ ಇನ್ಮುಂದೆ 108 ಆಂಬುಲೆನ್ಸ್ ಗಳ ನಿರ್ವಹಣೆ ಮಾಡಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಣೆ ಮಾಡಿದ್ದಾರೆ.
ಇನ್ಮುಂದೆ 108 ಆಂಬುಲೆನ್ಸ್ ಗಳ ನಿರ್ವಹಣೆ, ಕೆಲಸವನ್ನು ಯಾವುದೇ ಏಜೆನ್ಸಿ, ಸಂಸ್ಥೆಗೆ ಕೊಡಲ್ಲ. ಅದನ್ನು ಸರ್ಕಾರವೇ ನಿರ್ವಹಿಸಲಿದೆ ಎಂದು ಅವರು ಹೇಳಿದರು.
ವೈಟ್ ಟಾಪಿಂಗ್ ರಸ್ತೆ ಉದ್ಘಾಟನೆ
ಇಂದು ಬೆಂಗಳೂರಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದ ಪ್ರವೇಶದ್ವಾರದ ಬಳಿ ನೂತನ ವೈಟ್ ಟಾಪಿಂಗ್ ರಸ್ತೆಯ ಉದ್ಘಾಟನೆ ನೆರವೇರಿಸಿ, ಬಸ್ ಸಂಚಾರಕ್ಕೆ ಲೋಕಾರ್ಪಣೆಗೊಳಿಸಿದರು.
ರಾಜಧಾನಿಯ ಹೃದಯಭಾಗದಲ್ಲಿರುವ ಮೆಜೆಸ್ಟಿಕ್ ಬಸ್ ನಿಲ್ದಾಣ ಎಲ್ಲಾ ಬಸ್ ಮಾರ್ಗಗಳನ್ನು ಸಂಪರ್ಕಿಸುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರಸ್ತೆಗಳು ಸುಸಜ್ಜಿತವಾಗಿರುವಂತೆ ಮಾಡುವುದು ಮತ್ತು ಗುಂಡಿಮುಕ್ತ ರಸ್ತೆಗಳ ನಿರ್ಮಾಣ ನಮ್ಮ ಆದ್ಯತೆಯಾಗಿದೆ. ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
You Might Also Like
TAGGED:108 ambulance