ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಒಡಿಶಾದಕೊರಾಪುಟ್ ಜಿಲ್ಲೆಯ ಲ್ಯಾಮ್ಟಾಪುಟ್ ಬ್ಲಾಕ್ ನಲ್ಲಿ ನಡೆದಿದೆ.
ಇಲ್ಲಿನ ಗುಣೈಪಾದ ಎಸ್ ಸಿ, ಎಸ್ ಸ್ಟಿ ಬಾಲಕಿಯ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಭಾರತದ ಸಂವಿಧಾನದ 338 ಎ ವಿಧಿಯ ಅಡಿಯಲ್ಲಿ ತನಿಖೆ ನಡೆಸುತ್ತಿದೆ.
ಬಿಜೆಡಿ ನಾಯಕ ಮತ್ತು ಮಾಜಿ ಸಚಿವ ಟುಕುನಿ ಸಾಹು ಹಾಗೂ ಇತರರು ಸಲ್ಲಿಸಿದ್ದ ಗಂಭೀರ ದೂರಿನ ನಂತರ ನೋಟಿಸ್ ಜಾರಿ ಮಾಡಲಾಗಿದೆ. ಬಾಲಕಿಯ ಹಾಸ್ಟೇಲ್ ನಿರ್ವಹಣೆ ಮತ್ತು ಸುರಕ್ಷತೆಯಲ್ಲಿನ ವ್ಯವಸ್ಥಿತ ವೈಫಲ್ಯಗಳ ಬಗ್ಗೆ ಪ್ರಶ್ನೆ ಮೂಡಿದೆ.
ಎನ್ ಸಿ ಎಸ್ ಟಿ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ನೋಟಿಸ್ ಸ್ವೀಕರಿಸಿ 7ದಿನಗಳ ಒಳಗಾಗಿ ಪ್ರಕರಣದ ಸಂಗತಿಗಳು ಮತ್ತು ತೆಗೆದುಕೊಂದ ಕ್ರಮಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದೆ.