ಚಿಕ್ಕಮಗಳೂರು: ಹಲವು ದಿನಗಳಿಂದ ಚಿಕ್ಕಮಗಳುರು, ಹಾಸನ ಜಿಲ್ಲೆಗಳಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ‘ಕುಳ್ಳ’ ಹೆಸರಿನ ಕಾಡಾನೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಇಂದು ಒಂದು ಊರಿನಲ್ಲಿ ಪ್ರತ್ಯಕ್ಷವಾಗಿ ದಾಮ್ಧಲೆ ನಡೆಸಿದರೆ ನಾಳೆ ಮತ್ತೊಂದು ಊರಿನಲ್ಲಿ ನಲ್ಲಿ ದಾಂಧಲೆ ನಡೆಸಿ ಬೆಳೆಗಳನ್ನು ನಾಶಪಡಿಸುತ್ತಿದ್ದ ಕಾಡಾನೆ ಎರಡು ಜಿಲ್ಲೆಗಳಲ್ಲಿಯೂ ಆತಂಕ ಸೃಷ್ಟಿಸಿತ್ತು.
ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕು ದಿನಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಕಾಡಾನೆ ಕುಳ್ಳನನ್ನು ಬಂಧಿಸಿದ್ದಾರೆ. ಕುಳ್ಳ ಆನೆ ಸೆರೆಗೆ ಭೀಮ ಟೀಂ ಎಂಟ್ರಿಯಾಗಿ ಕಾರ್ಯಾಚರಣೆ ಮುಂದಾಗಿತ್ತು. ಆದರೆ ಸಾಧ್ಯವಗಿರಲಿಲ್ಲ. ಭೀಮ ಜೊತೆ ಏಕಲವ್ಯ ತಂಡದಿಂದಲೂ ಆನೆ ಸೆರೆ ಕಾರ್ಯಾಚರಣೆ ನಡೆಸಿ ಕೊನೆಗೂ ಕುಳ್ಳ ಆನೆಯನ್ನು ಸೆರೆಹಿಡಿಯಲಾಗಿದೆ.