ಮಾಜಿ ನೀಲಿ ತಾರೆಯ ಮನವಿಗೆ ನೆಟ್ಟಿಗರ ಕಿತಾಪತಿ: ಸೈಬರ್‌ ಟ್ರಕ್ ಚಿತ್ರಕ್ಕೆ ಫೋಟೋಶಾಪ್ ಕಾಮಿಡಿ | Photos

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಇತ್ತೀಚೆಗೆ ಟೆಸ್ಲಾ ಸೈಬರ್‌ಟ್ರಕ್ ಕುರಿತು ತಮ್ಮ ಅಸಮಾಧಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದು, ಅದು ತಕ್ಷಣವೇ ಹಾಸ್ಯಾಸ್ಪದ ಮೀಮ್‌ಗಳಿಗೆ ಕಾರಣವಾಗಿದೆ. ಎಲ್ಲವೂ ಶುರುವಾಗಿದ್ದು ರಾಪರ್ ರುಬಿ ರೋಸ್ ಅವರ ಫೋಟೋಗೆ ಮಿಯಾ ಮೆಚ್ಚುಗೆ ಸೂಚಿಸಿದಾಗ. ರುಬಿ ಕಾರ್ ಪಾರ್ಕ್‌ನಲ್ಲಿ ತಮ್ಮ ಆಕರ್ಷಕ ಬೆನ್ನು ಮತ್ತು ಸೊಂಟವನ್ನು ತೋರಿಸುತ್ತಾ ನಿಂತಿದ್ದ ಫೋಟೋವನ್ನು ಹಂಚಿಕೊಂಡಿದ್ದರು.

ಈ ಫೋಟೋ ಮಿಲಿಯನ್‌ಗಟ್ಟಲೆ ವೀಕ್ಷಣೆ ಮತ್ತು ಲೈಕ್‌ಗಳನ್ನು ಗಳಿಸಿತು. ಇದನ್ನು ಗಮನಿಸಿದ ಮಿಯಾ ಖಲೀಫಾ, ಫೋಟೋದ ಹಿನ್ನೆಲೆಯಿಂದ ಸೈಬರ್‌ಟ್ರಕ್ ಅನ್ನು ತೆಗೆದುಹಾಕುವಂತೆ ವಿನಂತಿಸಿದರು. ತನಗೆ ಫೋಟೋಶಾಪ್ ಮಾಡಲು ಬರುವುದಿಲ್ಲ ಮತ್ತು ಚಾಟ್‌ಜಿಪಿಟಿಯನ್ನು ಕೇಳಲು ಇಷ್ಟವಿಲ್ಲ ಎಂದೂ ಅವರು ಹೇಳಿಕೊಂಡರು.

ಮಿಯಾ ಅವರ ಈ ಪೋಸ್ಟ್ ಕೂಡ ತಕ್ಷಣ ವೈರಲ್ ಆಗಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯಿತು. ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ವಿನಂತಿಗೆ ತಮಾಷೆಯಾಗಿ ಪ್ರತಿಕ್ರಿಯಿಸಲು ಪ್ರಾರಂಭಿಸಿದರು. ಆದರೆ, ಮಿಯಾ ಬಯಸಿದ ರೀತಿಯಲ್ಲಿ ಯಾರೂ ಫೋಟೋಶಾಪ್ ಮಾಡಲಿಲ್ಲ! ಇದು ಇನ್ನಷ್ಟು ಹಾಸ್ಯಕ್ಕೆ ಕಾರಣವಾಯಿತು.

ಒಬ್ಬ ಬಳಕೆದಾರರು “ನಾನು ಸಾಮಾನ್ಯವಾಗಿ ಹೀಗೆ ಮಾಡುವುದಿಲ್ಲ. ಆದರೆ ನಿಮಗಾಗಿ” ಎಂದು ಬರೆದು, ಸೈಬರ್‌ಟ್ರಕ್ ಮೇಲೆ ದೊಡ್ಡದಾಗಿ “ನಾನು ಇಲ್ಲಿಲ್ಲ ಎಂದು ನಟಿಸಿ” ಎಂದು ಸೇರಿಸಿದರು! ಇನ್ನೊಬ್ಬರು ಸೈಬರ್‌ಟ್ರಕ್ ಅನ್ನು ತೆಗೆದುಹಾಕುವ ಬದಲು ರುಬಿ ರೋಸ್ ಅವರನ್ನೇ ರೋಬೋಟ್ ಆಗಿ ಪರಿವರ್ತಿಸಿದರು!

ಹೀಗೆ ನಾನಾ ರೀತಿಯ ತಮಾಷೆಯ ಫೋಟೋಶಾಪ್‌ಗಳ ಸುರಿಮಳೆಯ ನಡುವೆಯೂ, ಮಿಯಾ ಖಲೀಫಾ ಅಂತಿಮವಾಗಿ ಸೈಬರ್‌ಟ್ರಕ್ ಇಲ್ಲದ ಫೋಟೋವನ್ನು ಪಡೆದುಕೊಂಡರು. ಆದರೆ, ಈ ಇಡೀ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ನಗೆಯ ಅಲೆ ಎಬ್ಬಿಸಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read