BIG NEWS: ಹಣ್ಣು – ತರಕಾರಿ ಮೇಲಿನ ಸ್ಟಿಕ್ಕರ್ ಡೇಂಜರಸ್ ; FSSAI ನೀಡಿದೆ ಈ ಮಹತ್ವದ ಸೂಚನೆ !

ನವದೆಹಲಿ: ಮಾರುಕಟ್ಟೆಯಿಂದ ತಂದ ಹಣ್ಣು ಮತ್ತು ತರಕಾರಿಗಳನ್ನು ಹಾಗೆಯೇ ತೊಳೆದು ತಿನ್ನುತ್ತೀರಾ? ಹಾಗಾದರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನೀಡುತ್ತಿರುವ ಈ ಎಚ್ಚರಿಕೆಯನ್ನು ಗಮನಿಸಿ. ಹಣ್ಣು ಮತ್ತು ತರಕಾರಿಗಳ ಮೇಲಿನ ಸಣ್ಣ ಸ್ಟಿಕ್ಕರ್‌ಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು FSSAI ತಿಳಿಸಿದೆ.

ಸಾಮಾನ್ಯವಾಗಿ ಹಣ್ಣು ಮತ್ತು ತರಕಾರಿಗಳ ಮೇಲೆ ಬ್ರ್ಯಾಂಡ್ ಹೆಸರು ಅಥವಾ ಬಾರ್‌ಕೋಡ್ ಇರುವ ಸ್ಟಿಕ್ಕರ್‌ಗಳನ್ನು ನಾವು ಕಾಣುತ್ತೇವೆ. ಹೆಚ್ಚಿನವರು ಇದನ್ನು ತೆಗೆದು, ತೊಳೆದು ತಿನ್ನುತ್ತಾರೆ. ಆದರೆ ಕೇವಲ ತೊಳೆಯುವುದು ಸಾಕಾಗುವುದಿಲ್ಲ ಎಂದು FSSAI ಹೇಳಿದೆ. ಏಕೆಂದರೆ ಸ್ಟಿಕ್ಕರ್ ಅಂಟಿಸಲು ಬಳಸುವ ಅಂಟು ತಿನ್ನಲು ಯೋಗ್ಯವಲ್ಲ. ಅದು ತೊಳೆಯುವ ನಂತರವೂ ಹಣ್ಣು ಅಥವಾ ತರಕಾರಿಯ ಮೇಲೆ ಉಳಿಯಬಹುದು. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಇದು ಅಪಾಯಕಾರಿ.

ಅಷ್ಟೇ ಅಲ್ಲದೆ, ಹಣ್ಣು ಮತ್ತು ತರಕಾರಿಗಳನ್ನು ತಾಜಾವಾಗಿಡಲು ಮೇಣದ ಲೇಪನವನ್ನು ಮಾಡಿರುತ್ತಾರೆ. ಸ್ಟಿಕ್ಕರ್ ಈ ಮೇಣದ ಮೇಲೆ ಇದ್ದರೆ, ಸಿಪ್ಪೆ ತೆಗೆಯದೆ ತಿಂದರೆ ಮೇಣ ಮತ್ತು ಅಂಟು ಎರಡು ದೇಹ ಸೇರಿಕೊಳ್ಳಬಹುದು. ಜೊತೆಗೆ, ಸ್ಟಿಕ್ಕರ್ ಅಂಟಿಸಿದ ಜಾಗದಲ್ಲಿ ಕೀಟನಾಶಕಗಳು ಮತ್ತು ರಾಸಾಯನಿಕಗಳು ಹೆಚ್ಚು ಸಂಗ್ರಹವಾಗುವ ಸಾಧ್ಯತೆ ಇದೆ.

ಹಾಗಾಗಿ FSSAI ಸಲಹೆ ನೀಡುವುದು ಏನೆಂದರೆ, ಸಾಧ್ಯವಾದಷ್ಟು ಹಣ್ಣು ಮತ್ತು ತರಕಾರಿಗಳನ್ನು ಸಿಪ್ಪೆ ತೆಗೆದು ತಿನ್ನಿ. ವಿಶೇಷವಾಗಿ ಮೇಣದ ಲೇಪನವಿದ್ದರೆ ಖಂಡಿತ ಸಿಪ್ಪೆ ತೆಗೆಯಿರಿ. ಚೆನ್ನಾಗಿ ತೊಳೆಯುವುದು ಮುಖ್ಯವಾದರೂ, ಸ್ಟಿಕ್ಕರ್ ಮತ್ತು ಮೇಣದ ಅಂಶವಿದ್ದಾಗ ಅದು ಸಂಪೂರ್ಣ ಸುರಕ್ಷತೆ ನೀಡಲಾರದು. ನೀವು ಹೊರಗಡೆ ಅಥವಾ ಪ್ರಯಾಣದಲ್ಲಿರುವಾಗ ಹಣ್ಣುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಲು ಸಾಧ್ಯವಾಗದಿದ್ದರೆ, ಸಿಪ್ಪೆ ತೆಗೆದ ಹಣ್ಣುಗಳನ್ನು ತಿನ್ನುವುದು ಉತ್ತಮ.

ಮುಖ್ಯವಾಗಿ ಸೇಬು, ಪೇರಳೆ, ಮಾವು, ಸೌತೆಕಾಯಿ, ಆಮದು ಮಾಡಿದ ಸಿಟ್ರಸ್ ಹಣ್ಣುಗಳು ಮತ್ತು ದಪ್ಪ ಮೆಣಸಿನಕಾಯಿಗಳಂತಹ ಹಣ್ಣು ಮತ್ತು ತರಕಾರಿಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಿ. ಒಂದು ವೇಳೆ ನೀವು ಸೌತೆಕಾಯಿ ಅಥವಾ ಸೇಬಿನಂತಹ ಹಣ್ಣುಗಳ ಸಿಪ್ಪೆ ತಿನ್ನಲು ಬಯಸಿದರೆ, ಅದನ್ನು ಚೆನ್ನಾಗಿ ಉಜ್ಜಿ ತೊಳೆದು, ಸ್ಟಿಕ್ಕರ್ ಅಥವಾ ಮೇಣದ ಅಂಶ ಇಲ್ಲ ಎಂದು ಖಚಿತಪಡಿಸಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read