ಬುಲ್ಧಾನ (ಮಹಾರಾಷ್ಟ್ರ): ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಶೇಗಾಂವ್‌ನಲ್ಲಿರುವ ಪಲ್ಧಿವಾಲ್ ಪೆಟ್ರೋಲ್ ಪಂಪ್‌ನಲ್ಲಿ ಇಂಧನ ತುಂಬಿಸುವಾಗ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅನಾಹುತ ತಪ್ಪಿದೆ.
. ಪೆಟ್ರೋಲ್ ತುಂಬಿಸುವಾಗ ಬೈಕ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ಘಟನೆ ಸಂಭವಿಸಿದ್ದು, ಗ್ರಾಹಕರು ಮತ್ತು ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದೆ. ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ಕ್ಷಣಗಳು
ಇಡೀ ಘಟನೆಯನ್ನು ಪೆಟ್ರೋಲ್ ಪಂಪ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಬ್ಬಂದಿಯೊಬ್ಬರು ಮೋಟಾರ್‌ಸೈಕಲ್‌ಗೆ ಇಂಧನ ತುಂಬಿಸುತ್ತಿರುವುದನ್ನು ಕಾಣಬಹುದು. ಕೆಲವೇ ಕ್ಷಣಗಳ ನಂತರ, ಬೈಕ್‌ನ ಇಂಧನ ಟ್ಯಾಂಕ್‌ನಿಂದ ಜ್ವಾಲೆಗಳು ಇದ್ದಕ್ಕಿದ್ದಂತೆ ಹೊರಹೊಮ್ಮಿದವು.ನಂತರ ಕೊಂಚ ಕೂಡ ವಿಚಲಿತರಾಗದೇ ಪೆಟ್ರೋಲ್ ಬಂಕ್ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
VIDEO : खिशात मोबाईल वाजला अन् पेट्रोल पंपावर पेट्रोल भरताना उडाला आगीचा भडका, CCTV समोर! pic.twitter.com/RulDoUzQTR
— News18Lokmat (@News18lokmat) May 12, 2025