ಇಸ್ಲಾಮಾಬಾದ್: ಭಾರತದೊಂದಿಗಿನ ಸಂಘರ್ಷದಲ್ಲಿ ತನ್ನ ಒಂದು ವಿಮಾನಕ್ಕೆ ಹಾನಿಯಾಗಿದೆ ಎಂದು ಪಾಕಿಸ್ತಾನ ಸೇನೆ ಹೇಳಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಆಪರೇಷನ್ ಬನ್ಯನ್-ಉಮ್-ಮರ್ಸೂಸ್ ( ಭಾರತದ ವಿರುದ್ಧ ಪಾಕ್ ಸೇನಾ ಕಾರ್ಯಾಚರಣೆ) ತೀರ್ಮಾನದ ಬಗ್ಗೆ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ಒಂದು ವಿಮಾನಕ್ಕೆ ಸಣ್ಣ ಹಾನಿಯಾಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ ವಿಮಾನದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.
ಭಾರತೀಯ ಪೈಲಟ್ ಗಳಲ್ಲಿ ಯಾರೂ ಪಾಕಿಸ್ತಾನದ ವಶದಲ್ಲಿಲ್ಲ. ಇದು ಸುಳ್ಳು ಸುದ್ದಿಯಾಗಿದೆ. ಸಾಮಾಜಿಕ ಮಾಧ್ಯಮಗಳ ವರದಿಯನ್ನಾಧರಿಸಿವೆ ಎಂದಿದ್ದಾರೆ.