BIG NEWS : ಬುದ್ಧ ಪೂರ್ಣಿಮೆಯ ಶುಭಾಶಯ ಕೋರಿದ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ

ಪ್ರಧಾನಿ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಜನತೆಗೆ ಬುದ್ಧ ಪೂರ್ಣಿಮೆಯ ಶುಭಾಶಯ ಕೋರಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ‘’ಸಮಸ್ತ ದೇಶವಾಸಿಗಳಿಗೆ ಬುದ್ಧ ಪೂರ್ಣಿಮೆಯ ಶುಭಾಶಯಗಳು. ಸತ್ಯ, ಸಮಾನತೆ ಮತ್ತು ಸಾಮರಸ್ಯದ ತತ್ವಗಳನ್ನು ಆಧರಿಸಿದ ಭಗವಾನ್ ಬುದ್ಧನ ಸಂದೇಶಗಳು ಮಾನವೀಯತೆಗೆ ಮಾರ್ಗದರ್ಶಿಯಾಗಿವೆ. ತ್ಯಾಗ ಮತ್ತು ತಪಸ್ಸಿಗೆ ಮೀಸಲಾದ ಅವರ ಜೀವನವು ವಿಶ್ವ ಸಮುದಾಯವನ್ನು ಸಹಾನುಭೂತಿ ಮತ್ತು ಶಾಂತಿಯ ಕಡೆಗೆ ಯಾವಾಗಲೂ ಪ್ರೇರೇಪಿಸುತ್ತದೆ’ ಎಂದಿದ್ದಾರೆ.

ಗೌತಮ ಬುದ್ಧನ ಜೀವನ ಸಂದೇಶಗಳಾದ ಪ್ರೀತಿ, ಸಹನೆ, ಸಹಬಾಳ್ವೆ ಮತ್ತು ಶಾಂತಿಯು ಮನುಕುಲವನ್ನು ಕೈಹಿಡಿದು ಮುನ್ನಡೆಸಲಿ ಎಂದು ಹಾರೈಸುತ್ತೇನೆ. ತನ್ನ ಬೋಧನೆಗಳ ಮೂಲಕ ಬೌದ್ಧಿಕ ಅಂಧಕಾರವ ಕಳೆದು ಜ್ಞಾನದ ಬೆಳಕು ಹರಿಸಿದ ಅರಿವಿನ ಗುರು ಗೌತಮ ಬುದ್ಧನನ್ನು ಅರಿಯೋಣ, ಅವರಂತೆ ಬಾಳೋಣ. ನಾಡಿನ ಜನತೆಗೆ ಬುದ್ಧ ಪೂರ್ಣಿಮೆಯ ಶುಭಾಶಯಗಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read