ನವದೆಹಲಿ: ಈ ಬಾರಿ ವಾಡಿಕೆಗೂ ಮುನ್ನವೇ ನೈಋತ್ಯ ಮುಂಗಾರು ಕೇರಳ ಪ್ರವೇಶಿಸಲಿದ್ದು, ಈ ತಿಂಗಳಾಂತ್ಯದಿಂದಲೇ ಮಳೆ ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಜೂನ್ 1ರಂದು ನೈಋತ್ಯ ಮುಂಗಾರು ಕೇರಳ ಪ್ರವೇಶಿವುದು ಸಾಮಾನ್ಯವಾಗಿ ವಾಡಿಕೆ. ಆದರೆ ಈ ಬಾರಿ 5 ದಿನ ಮೊದಲೇ ಅಂದರೆ ಮೇ 27ರಂದೇ ನೈಋತ್ಯ ಮಾನ್ಸೂನ್ ಕೇರಳ ಕರಾವಳಿ ಪ್ರವೇಶಿಸಲಿದೆ.
ಒಂದೊಮ್ಮೆ ಮೇ 27ಕ್ಕೆ ಮುಂಗಾರು ಪ್ರವೇಶವಾದರೆ 2009ರ ಬಳಿಕ 16 ವರ್ಷಗಳ ಬಳಿಕ ಮೊದಲ ಬಾರಿಗೆ ಬೇಗನೇ ಮುಂಗಾರು ಆರಂಭವಾದಂತಾಗಲಿದೆ. 2009ರ ಮೇ 23ರಂದು ಇದೇ ರೀತಿ ಬಹುಬೇಗನೇ ಕೇರಳಕ್ಕೆ ಮುಂಗಾರು ಎಂಟ್ರಿಯಾಗಿತ್ತು.
ಕೇರಳಕ್ಕೆ ಮಾನ್ಸೂನ್ ಪ್ರವೇಶದ ಬಳಿಕ ಭಾರತದ ಮುಖ್ಯ ಭೂ ಭಾಗಗಳಿಗೆ ಮಳೆ ಆಗಮನದ ಬಗ್ಗೆ ಅಧಿಕೃತವಾಗಿ ಘೋಷಿಸಲಾಗುತ್ತದೆ. ಸಾಮಾನ್ಯವಗಿ ಜೂನ್ 1ರಂದು ಕೇರಳ ಕರಾವಳಿ ಪ್ರವೇಶಿಸುವ ಮುಂಗಾರು ಜೂನ್ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಸೆ.17ರ ಸುಮಾರಿಗೆ ವಾಯುವ್ಯ ಭಾರತದಿಂದ ಹಿಂದೆ ಸರಿಯಲಾರಂಭಿಸಿ, ಅಕ್ಟೋಬರ್ 15ರ ವೇಳೆಗೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.