ಬೆಂಗಳೂರು : ರಾಜ್ಯದ ಎಲ್ಲಾ ವಕ್ಸ್ಗೆ ಸೇರಿದ ಮಸೀದಿಗಳಲ್ಲಿ ಹಾಗೂ ಇತರೆ ಮಸೀದಿಗಳಲ್ಲಿ ಪ್ರಾರ್ಥಿಸಲು ಸೂಕ್ತ ಸೂಚನೆ ನೀಡಲು ಸಚಿವ ಜಮೀರ್ ಸೂಚನೆ ನೀಡಿದ್ದಾರೆ.
ಕಾಶ್ಮೀರ ಕಣಿವೆಯ ಪೆಹಲ್ಲಾಮ್ನಲ್ಲಿ ಉಗ್ರಗಾಮಿಗಳು 26 ಭಾರತೀಯ ಪ್ರವಾಸಿಗರನ್ನು ಹತ್ಯೆಗೈದ ಹಿನ್ನಲೆಯಲ್ಲಿ ಭಾರತೀಯ ಸೈನ್ಯ “ಅಪರೇಷನ್ ಸಿಂಧೂರ” ಎಂಬ ಹೆಸರಿನಲ್ಲಿ ನಡೆಸಿದ ದಾಳಿಯಲ್ಲಿ ಉಗ್ರರ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಲಾಗಿದೆ.
ಭಯೋತ್ಪಾದಕರನ್ನು ದಮನ ಮಾಡಿ ದೇಶದ ಶಾಂತಿಗೆ ಮುಂದಾಗುತ್ತಿರುವ ನಮ್ಮ ಹೆಮ್ಮೆಯ ದೇಶದ ಸೈನಿಕರಿಗೆ ಶಕ್ತಿ ತುಂಬಲು ಅವರ ಶ್ರೇಯಸ್ಸಿಗಾಗಿ ರಾಜ್ಯದ ಎಲ್ಲಾ ವಕ್ಸ್ಗೆ ಸೇರಿದ ಮಸೀದಿಗಳಲ್ಲಿ ಹಾಗೂ ಇತರೆ ಮಸೀದಿಗಳಲ್ಲಿ ಪ್ರಾರ್ಥಿಸಲು ಸೂಕ್ತ ಸೂಚನೆ ನೀಡಲು ಸೂಚಿಸಿದ್ದಾರೆ.

You Might Also Like
TAGGED:ಆಪರೇಷನ್ ಸಿಂಧೂರ್