ನವದೆಹಲಿ: ಗಡಿಯಲ್ಲಿ ವಾಯು ದಾಳಿ ನಡೆಸಿದ ಪಾಕಿಸ್ತಾನಕ್ಕೆ ಭಾರತದಿಂದ ಸರಿಯಾಗೇ ತಿರುಗೇಟು ನೀಡಲಾಗಿದೆ. ಪಾಕಿಸ್ತಾನದ ದಾಳಿ ಯತ್ನಗಳನ್ನೆಲ್ಲಾ ವಿಫಲಗೊಳಿಸಿದ ಭಾರತ ಮತ್ತೊಂದು ತಿರುಗೇಟು ನೀಡಿದೆ.
ಪಾಕಿಸ್ತಾನಕ್ಕೆ ಏರ್ ಸ್ಟ್ರೈಕ್ ನಂತರ ವಾಟರ್ ಸ್ಟ್ರೈಕ್ ಮೂಲಕ ಶಾಕ್ ನೀಡಲಾಗಿದೆ. ರಿಯಾಸಿಯಲ್ಲಿ ಚೈನಾಬ್ ನದಿಗೆ ನಿರ್ಮಿಸಿರುವ ಸಲಾಲ್ ಜಲಾಶಯದಿಂದ ಹಲವಾರು ಗೇಟ್ ಗಳನ್ನು ತೆರೆದು ನೀರು ಬಿಡುಗಡೆ ಮಾಡಲಾಗಿದೆ.
ಡ್ಯಾಮ್ ನಿಂದ ದಿಢೀರ್ ನೀರು ಬಿಟ್ಟು ಪಾಕಿಸ್ತಾನಕ್ಕೆ ಶಾಕ್ ನೀಡಲಾಗಿದೆ. ದಿಢೀರ್ ನೀರು ಬಿಡುಗಡೆಯಿಂದಾಗಿ ಪಾಕಿಸ್ತಾನದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ರಿಯಾಸಿ ಜಲಾಶಯದಿಂದ ಹಲವಾರು ಗೇಟ್ ಗಳನ್ನು ತೆರೆದು ನೀರು ಬಿಡುಗಡೆ ಮಾಡಲಾಗಿದ್ದು, ಪಾಕಿಸ್ತಾನದ ಹಲವು ಕಡೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಈ ಹಿಂದೆಯೂ ಭಾರತ ಸಿಂಧೂ ನದಿ ನೀರನ್ನು ಏಕಾಏಕಿ ಹರಿಸಿದ್ದರಿಂದ ಪಾಕ್ ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.
ಇದೀಗ ಜಮ್ಮು ಮತ್ತು ಕಾಶ್ಮೀರದ ಎರಡು ಅಣೆಕಟ್ಟುಗಳಾದ ರಿಯಾಸಿಯಲ್ಲಿರುವ ಸಲಾಲ್ ಹೈಡ್ರೋ ಯೋಜನೆ ಮತ್ತು ರಾಂಬನ್‌ನಲ್ಲಿರುವ ಬಗ್ಲಿಹಾರ್ ಹೈಡ್ರೋ ಯೋಜನೆಗಳ ಗೇಟ್‌ಗಳನ್ನು ಗುರುವಾರ ತೆರೆಯಲಾಗಿದ್ದು, ಪಾಕಿಸ್ತಾನಕ್ಕೆ ಚೆನಾಬ್ ನೀರು ಹರಿಯುವಂತೆ ಮಾಡಲಾಗಿದೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸಿದ ನಂತರ ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ನಿಲ್ಲಿಸಲು ಕಳೆದ ವಾರ ಸಲಾಲ್ ಮತ್ತು ಬಗ್ಲಿಹಾರ್ ಯೋಜನೆಗಳ ಗೇಟ್‌ಗಳನ್ನು ಮುಚ್ಚಿದ್ದರಿಂದ ಚೆನಾಬ್ ನದಿಯಲ್ಲಿ ನೀರಿನ ಮಟ್ಟವು ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿತ್ತು.