ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿರುವ ಮ್ಯಾನೇಜ್ಮೆಂಟ್ ಸೀಟುಗಳ ಭರ್ತಿಗೆ ನಡೆಸುವ ಕಾಮೆಡ್ –ಕೆ ಪರೀಕ್ಷೆ ಮೇ 10ರಂದು ದೇಶಾದ್ಯಂತ ನಡೆಯಲಿದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದಾಗಿದೆ. 28 ರಾಜ್ಯಗಳು, 179 ನಗರಗಳ 248 ಪರೀಕ್ಷಾ ಕೇಂದ್ರಗಳಲ್ಲಿ ಮೂರು ಹಂತದಲ್ಲಿ ಪರೀಕ್ಷೆ ನಡೆಯಲಿದೆ.
ಬೆಳಗ್ಗೆ 8.30 ರಿಂದ 11:30 ರವರೆಗೆ, ಮಧ್ಯಾಹ್ನ 1 ರಿಂದ ಸಂಜೆ 4 ಗಂಟೆಯವರೆಗೆ. ಸಂಜೆ 5:30 ರಿಂದ ರಾತ್ರಿ 8.30 ರವರೆಗೆ ಪರೀಕ್ಷೆ ನಡೆಯಲಿದ್ದು, ಒಟ್ಟಾರೆ 1,31,937 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ವೇಳೆ ಎರಡು ಭಾವಚಿತ್ರ, ಪ್ರವೇಶ ಪತ್ರ, ಗುರುತಿನ ಚೀಟಿ, ಪಾರದರ್ಶಕತೆಯ ವಾಟರ್ ಬಾಟಲ್, ಪೆನ್ಸಿಲ್ ತೆಗೆದುಕೊಂಡು ಹೋಗಬಹುದು. ಸರ್ಕಾರ ಪ್ರವೇಶ ಪರೀಕ್ಷೆಗಳಿಗೆ ನಿಗದಿಪಡಿಸಿದ ವಸ್ತ್ರ ಸಂಹಿತೆಯನ್ನೇ ಪಾಲಿಸಲಾಗುವುದು ಎಂದು ಕಾಮೆಡ್ -ಕೆ ತಿಳಿಸಿದೆ.