ಪಂಜಾಬ್ : ಆಪರೇಷನ್ ಸಿಂಧೂರ್ ಬೆನ್ನಲ್ಲೇ ಪಾಕಿಸ್ತಾನ ಮತ್ತೆ ನರಿ ಬುದ್ದಿ ತೋರಿಸಿದ್ದು, ಭಾರತದ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಪಂಜಾಬ್’ ನ ಅಮೃತಸರದಲ್ಲಿ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದೆ.
ಪಾಕ್ ದಾಳಿಗೆ ಪ್ರತಿಯಾಗಿ ಭಾರತ ಮಿಸೈಲ್ ನ್ನು ಹೊಡೆದುರುಳಿಸಿದೆ. ಪಂಜಾಬ್ ನ ಅಮೃತಸರದ ಬಳಿ ಪಾಕ್ ಕ್ಷಿಪಣಿಯನ್ನು ಹೊಡೆದುರುಳಿಸಿದೆ.
ಭಾರತೀಯ ಸೇನೆ ಮತ್ತು ವಾಯುಪಡೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಸ್ಥಳಗಳನ್ನು ನಿಖರವಾಗಿ ಗುರಿಯಾಗಿಸಲು ಆಪರೇಷನ್ ಸಿಂಧೂರ್ ನಲ್ಲಿ ತನ್ನ ರಕ್ಷಣಾ ಮೂಲಸೌಕರ್ಯವನ್ನು ತಂತ್ರಗಾರಿಕೆಯಿಂದ ಬಳಸಿತು. ಭಾರತೀಯ ವಾಯುಪಡೆಯು ಗಾಳಿಯಿಂದ ಮೇಲ್ಮೈ ಕ್ಷಿಪಣಿಗಳಿಂದ ದೂರದ ಗುರಿಗಳ ಮೇಲೆ ದಾಳಿ ನಡೆಸಿದರೆ, ಭಾರತೀಯ ಸೇನೆಯು ಕಾಮಕಾಜಿ ಡ್ರೋನ್ಗಳು ಸೇರಿದಂತೆ ಸ್ಫೋಟಕ ಶಸ್ತ್ರಾಸ್ತ್ರಗಳೊಂದಿಗೆ ಹತ್ತಿರದ ಗುರಿಗಳನ್ನು ಹೊಡೆದುರುಳಿಸಿತು.
You Might Also Like
TAGGED:ಆಪರೇಷನ್ ಸಿಂಧೂರ್