ಇಸ್ಲಾಮಾಬಾದ್: ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಉಗ್ರ ಸಂಘಟನೆ ಅಲ್ ಖೈದಾ ಕಿಡಿಕಾರಿದೆ.
ಜಮ್ಮು-ಕಾಶ್ಮೀರದ ಪಹಲ್ಗಾಂ ನಲ್ಲಿ ಪಾಕಿಸ್ತಾನ ಉಗ್ರರು ಗುಂಡಿನ ದಾಳಿ ನಡೆಸಿ 26 ಪ್ರವಾಸಿಗರನ್ನು ಬಲಿಪಡೆದಿದ್ದಕ್ಕೆ ಭಾರತೀಯ ಸೇನೆ ಪಾಕಿಸ್ತಾನ ಉಗ್ರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ ಕಾರ್ಯಾಚಾರಣೆ ಮೂಲಕ ಕ್ಷಿಣಪಣಿ ದಾಳಿ ನಡೆಸಿ ಭಯೋತ್ಪಾದಕರ ಕ್ಯಾಂಪ್ ಗಳನ್ನು ನೆಲಸಮ ಮಾಡಿದೆ. ಭಾರತೀಯ ಸೇನೆ ದಾಳಿಗೆ ಇದೀಗ ಉಗ್ರ ಸಂಘತನೆ ಅಲ್ ಖೈದಾ ಕಿಡಿಕಾರಿದೆ.
ಭಾರತದ ‘ಭಗವಾ ಸರ್ಕಾರ’ ಬಾಂಬ್ ದಾಳಿ ನಡೆಸಿದೆ. ಮಸೀದಿ ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಭಾರತ ಇಸ್ಲಾಂ ವಿರುದ್ಧ ದಶಕಗಳಿಂದ ಯುದ್ಧ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಇಸ್ಲಾಂ ಮತ್ತು ಮುಸ್ಲಿಂರನ್ನು ರಕ್ಷಿಸಲು ಹೋರಾಟ ನಡೆಸಬೇಕಿದೆ ಎಂದು ಅಲ್ ಖೈದಾ ಇನ್ ದಿ ಸಬ್ ಕಾಂಟಿನೆಂಟ್ ಹೇಳಿಕೆ ಬಿಡುಗಡೆ ಮಾಡಿದೆ.