ನವದೆಹಲಿ: ಒಂದು ಲಕ್ಷ ರೂಪಾಯಿ ಗಡಿ ದಾಟಿದ ನಂತರ ಸ್ವಲ್ಪ ಇಳಿಕೆ ಕಂಡಿದ್ದ ಚಿನ್ನದ ಮತ್ತೆ ಒಂದು ಲಕ್ಷ ರೂಪಾಯಿ ಗಡಿ ದಾಟಿ ದಾಖಲೆ ಬರೆದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 1,00,750 ರೂಪಾಯಿಗೆ ತಲುಪಿದೆ. ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಗಡಿ ಉದ್ವಿಗ್ನತೆ ಸ್ಥಿತಿ ದರ ಹೆಚ್ಚಳಕ್ಕೆ ಕಾರಣವೆಂದು ವಿಶ್ಲೇಷಿಸಲಾಗಿದೆ.
ಶೇ. 99.5 ಪರಿಶುದ್ಧತೆಯ ಚಿನ್ನ ಬುಧವಾರ ಒಂದೇ ದಿನ 1000 ರೂ. ಏರಿಕೆ ಕಂಡಿದ್ದು, 1,00,750 ರೂಪಾಯಿಗೆ ತಲುಪಿದೆ. ಮಂಗಳವಾರ 99,750 ರೂ. ಇತ್ತು. ಆಭರಣ ಚಿನ್ನದ ದರ ಕೂಡ 1050 ರೂಪಾಯಿ ಏರಿಕೆ ಕಂಡಿದ್ದು, 1,00, 350 ರೂಪಾಯಿಗೆ ತಲುಪಿದೆ. ಮಂಗಳವಾರ 99,300 ರೂ. ರೂಪಾಯಿ ಇತ್ತು.
ಬೆಳ್ಳಿ ದರ ಕೆಜಿಗೆ 440 ಏರಿಕೆಯಾಗಿ 98,940 ರೂ.ಗೆ ತಲುಪಿದೆ. ಹಿಂದಿನ ದಿನ 98,500 ರೂ. ದರ ಇತ್ತು.