ಮಂಗಳವಾರ-ಬುಧವಾರ ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಭಾರತದ ಮಿಲಿಟರಿ ದಾಳಿಗೆ ಪ್ರತಿಕ್ರಿಯಿಸಲು ಪಾಕಿಸ್ತಾನ ಸರ್ಕಾರ ತನ್ನ ಸೈನ್ಯಕ್ಕೆ ಅಧಿಕಾರ ನೀಡಿದೆ ಎಂದು ವರದಿಯಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸುಮಾರು ಹದಿನೈದು ದಿನಗಳ ನಂತರ, ಮಂಗಳವಾರ-ಬುಧವಾರ ಮಧ್ಯರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಭಯೋತ್ಪಾದಕ ಶಿಬಿರಗಳ ಮೇಲೆ ಭಾರತವು ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಸರಣಿ ನಿಖರ ದಾಳಿಗಳನ್ನು ಪ್ರಾರಂಭಿಸಿತು.
ಪತ್ರಿಕಾ ಪ್ರಕಟಣೆಯ ಪ್ರಕಾರ, ಭಾರತದ ದಾಳಿಯನ್ನು “ಅಪ್ರಚೋದಿತ, ಹೇಡಿತನದ ಮತ್ತು ಕಾನೂನುಬಾಹಿರ ಯುದ್ಧದ ಕೃತ್ಯ” ಎಂದು ಕರೆದಿದೆ.ತನ್ನ ಭೂಪ್ರದೇಶದಲ್ಲಿ ಭಯೋತ್ಪಾದಕ ಶಿಬಿರಗಳಿವೆ ಎಂಬ ಭಾರತದ ಆರೋಪಗಳನ್ನು ಪಾಕಿಸ್ತಾನ ಬಲವಾಗಿ ತಿರಸ್ಕರಿಸುತ್ತಿದೆ. ಏಪ್ರಿಲ್ 22, 2025 ರ ನಂತರ, ಪಾಕಿಸ್ತಾನವು ವಿಶ್ವಾಸಾರ್ಹ, ಪಾರದರ್ಶಕ ಮತ್ತು ತಟಸ್ಥ ತನಿಖೆಗೆ ಪ್ರಾಮಾಣಿಕ ಪ್ರಸ್ತಾಪವನ್ನು ನೀಡಿತು, ದುರದೃಷ್ಟವಶಾತ್ ಅದನ್ನು ಸ್ವೀಕರಿಸಲಾಗಲಿಲ್ಲ” ಎಂದು ಅದು ಹೇಳಿದೆ.
ಭಾರತವು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ ಸರ್ಕಾರ, “ಆತ್ಮರಕ್ಷಣೆಗಾಗಿ, ಒಂದು ಸಮಯ, ಸ್ಥಳ ಮತ್ತು ತನ್ನ ಆಯ್ಕೆಯ ವಿಧಾನದಲ್ಲಿ” ಪ್ರತಿಕ್ರಿಯಿಸುವ ಹಕ್ಕನ್ನು ಪಾಕಿಸ್ತಾನ ಕಾಯ್ದಿರಿಸಿದೆ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಪಾಕಿಸ್ತಾನದ ಸಶಸ್ತ್ರ ಪಡೆಗಳಿಗೆ ಅಧಿಕಾರ ನೀಡಲಾಗಿದೆ ಎಂದು ಅದು ಹೇಳಿದೆ.