ಬೆಂಗಳೂರು: ಕೆಪಿಎಸ್ ಸಿ ಮುಖ್ಯಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ವಿಧಾನಪರಿಶತ್ ಸದಸ್ಯ ಸಿ.ಟಿ.ರವಿ, ಎಲ್ಲಾ ಪರೀಕ್ಷೆನೂ ಸೋರಿಕೆ ಸೋರಿಕೆ ಸೋರಿಕೆ. ಇವರಿಗೆ ಒಂದೇ ಒಂದು ಪರೀಕ್ಷೆಯನ್ನು ನೆಟ್ಟಗೆ ಮಾಡುವ ಯೋಗ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಒಂದು ಪರೀಕ್ಷೆ ಸರಿಯಾಗಿ ನಡೆಸಲಾಗದವರು ಪೆಹಲ್ಗಾಮ್ ದಾಳಿ ಇಂಟಲಿಜನ್ಸ್ ಫೇಲುವರ್ ಅಂತಾರೆ. ಇವರ ಯೋಗ್ಯತೆಗೆ ಒಂದು ಪರೀಕ್ಷೆಯನ್ನೂ ನೆಟ್ಟಗೆ ಮಾಡುವ ಯೋಗ್ಯತೆ ಕಾಂಗೆಸ್ ನಾಯಕರಿಗಿಲ್ಲ ಎಂದರು.
ಒಂದು ಗೆಜೆಟೆಡ್ ಪ್ರೊಬೆಷನರಿ ಹುದ್ದೆ ಪರೀಕ್ಷೆ ಕೂಡ ಪಾರದರ್ಶಕವಾಗಿ, ಪ್ರಾಮಣಿಕವಾಗಿ, ನಿಸ್ಪಕ್ಷಪಾತವಾಗಿ ನಡೆಸುವ ಯೋಗ್ಯತೆ ಇಲ್ಲ. ಇವರೆಲ್ಲ ಅಂತರಾಷ್ಟ್ರದ ಬಗ್ಗೆ, ಗುಪ್ತಚರ ಇಲಾಖೆ ವೈಫಲ್ಯದ ಬಗ್ಗೆ ಮಾತನಡುತ್ತಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ ಇದು ಕೇವಲ ನನ್ನ ವಿರುದ್ಧ ನಡೆಯುತ್ತಿರುವ ಕೇಸಲ್ಲ, ಶಾಸಕಾಂಗ ವರ್ಸಸ್ ಕಾರ್ಯಾಂಗ, ಶಾಸಕಾಂಗ ವರ್ಸಸ್ ನ್ಯಾಯಾಂಗ ಎಂದು ಹೇಳಿದರು. ಅವರು ನೀಡಿದ ದೂರಿಗೆ ಹೇಗೆ ನನ್ನನ್ನು ಬಂಧಿಸಿ ವಿಚಾರಣೆ ನಡೆಸಿದರೋ ಹಾಗೇ ನಾನೂ ಕೂದ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು ನೀಡಿದ್ದಾನೆ. ಅದರಂತೆ ಅವರನ್ನೂ ಬಂಧಿಸಿ ವಿಚಾರಣೆ ನಡೆಸಿಲ್ಲ ಯಾಕೆ? ಈ ಸರ್ಕಾರ ನ್ಯಾಯಯುತವಗೈ, ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ ಎಂದರು.
ಸದನದ ಒಳಗೆ ನಡೆಯುವ ಘತನೆಗಳನ್ನು ಸಭಾಪತಿಗಳು, ಸ್ಪೀಕರ್ ಮಾತ್ರ ನೋಡಿಕೊಳ್ಳಬೇಕು. ನಾನು ಪ್ರಕರಣದ ಬಗ್ಗೆ ವಯ್ಕ್ತಿಗತವಾಗಿ, ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇನೆ ಎಂದು ಹೇಳಿದರು.