ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿ, ಬಾಯಿಗೆ ಬಂದಂತೆ ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಕೇಂದ್ರ ಕಾರಾಗೃಹ ವೀಕ್ಷಣೆಗಾರನನ್ನು ಅಮನತುಗೊಳಿಸಿ ಆದೇಶ ಹೂರಡಿಸಲಾಗಿದೆ.
ಹೆಚ್.ಎನ್.ಮಧುಕುಮಾರ್ ಸಸ್ಪೆಂಡ್ ಆಗಿರುವ ಕಾರಾಗೃಹ ವೀಕ್ಷಣೆಗಾರ. ಕಾರಾಗೃಹ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್ ಅಮನತು ಆದೇಶ ಹೊರಡಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ವೇಳೆ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿದ ವಿಚಾರವಾಗಿ ಗರಂ ಆಗಿದ್ದ ಮುಖ್ಯಮಂತ್ರಿ ಸಿದರಾಮಯ್ಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಕೈ ಎತ್ತಿ ಗದರಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಹೆಚ್.ಎನ್.ಮಧುಕುಮಾರ್, ಸಿಎಂ ವಿರುದ್ಧ ಹರಿಹಾಯ್ದು ನಿಂದಿಸಿ ವಿಡಿಯೋ ಅಪ್ ಲೋಡ್ ಮಾಡಿದ್ದರು.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕಾರಾಗೃಹ ಮುಖ್ಯ ಅಧಿಕ್ಷಕರು, ಮಧುಕುಮಾರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.