ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ನಾಡಕಚೇರಿ ಕುಸಿದು ಬಿದ್ದ ಘಟನೆ ಚಿಕ್ಕಮಗಳುರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.
ಒಂದು ವರ್ಷದ ಹಿಂದಷ್ಟೇ ನಡಕಚೇರಿಯನ್ನು 5 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಲಾಗಿತ್ತು. ಅಧಿಕಾರಿಗಳು, ಜನರು ಕಚೇರಿಯಲ್ಲಿದ್ದಾಗಲೇ ಏಕಾಏಕಿ ಕಟ್ಟಡ ಕುಸಿದು ಬಿದ್ದಿದೆ.
ಅದೃಷ್ಟವಶಾತ್ ಯಾವುದೇ ಅಪಾಯಂಸಂಭವಿಸಿಲ್ಲ. ಕಚೇರಿಯಲ್ಲಿದ ದಾಖಲೆಗಳು ಮಣ್ಣಿನಲ್ಲಿ ನಾಶವಾಗಿವೆ. ವಾರದಿಂದ ಸುರಿದ ಮಳೆಯಿಂದಾಗಿ ನಡಕಚೇರಿ ಕಟ್ತಡ ತೇವಗೊಂಡು ಈ ಅವಘಡ ಸಂಭವಿಸಿದೆ.