ಬೆಂಗಳೂರು : ಬೆಂಗಳೂರಿನ ಚಂದಾಪುರದ ಸಮೀಪ ನಿಗೂಢ ಸ್ಪೋಟವಾಗಿದ್ದು, ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕಲ್ ತಾಲೂಕಿನ ಚಂದಾಪುರದ ಬನಹಳ್ಳಿ ಬಳಿ ನಿಗೂಡ ಸ್ಪೋಟ ಸಂಭವಿಸಿದೆ. ಸ್ಪೋಟದ ಶಬ್ದಕ್ಕೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಸ್ಪೋಟದ ತೀವ್ರತೆಗೆ ಕಾಂಕ್ರೀಟ್ ರಸ್ತೆ ಪುಡಿ ಪುಡಿಯಾಗಿದೆ. ಆತಂಕಗೊಂಡು ಸ್ಥಳೀಯರು ಮನೆ ಒಳಗೆ ಓಡಿದ್ದಾರೆ.