ಬೆಂಗಳೂರು: ಮೆಟ್ರೋದಲ್ಲಿ ಅಹಾರ ಸೇವಿಸುವುದು, ಪಾನ್ ಮಸಾಲಾ ಹಾಕುವುದು ಮಾಡಬಾರದು ಎಂಬುದು ಗೊತ್ತಿದ್ದರೂ ಕೆಲವರು ಇಂತಹ ಕೆಲಸ ಮಾಡಿ ಉದ್ಧಟತನ ಮೆರೆಯುತ್ತಾರೆ. ಇದೀಗ ಮೆಟ್ರೋ ಅವರಣದಲ್ಲಿ ಪ್ರಯಾಣಿಕನೊಬ್ಬ ಉಗುಳಿದ್ದು, ಬಿಎಂಆರ್ ಸಿ ಎಲ್ ಶಿಸ್ತು ಕ್ರಮ ಕೈಗೊಂಡಿದೆ.
ಕನಕಪುರ ರಸ್ತೆಯಲ್ಲಿನ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್ ಫಾರ್ಂ 1ರ ಲಿಫ್ಟ್ ಬಳಿ ಪ್ರಯಣಿಕನೊಬ್ಬ ಪನ್ ಮಸಾಲಾ ಉಗುಳಿದ್ದ. ಈ ವ್ಯಕ್ತಿಯನ್ನು ಪತ್ತೆ ಮಾಡಿರುವ ಮೆಟ್ರೋ ಸಿಬ್ಬಂದಿಗಳು ಆತನಿಗೆ ದಂಡ ವಿಧಿಸಿದ್ದಾರೆ.
ಮೆಟ್ರೋ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ದಂಡ ವಿಧಿಸಲಾಗಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ. ಅಲ್ಲದೇ ಮೆಟ್ರೋ ಆವರಣದಲ್ಲಿ ಉಗುಳುವುದು ಹಾಗೂ ಕಸದಂಚುಗಳನ್ನು ಎಸೆಯುವುದು ಪರಿಸರ ಹಾಳಾಗುವುದಲ್ಲದೇ ಇತರೆ ಪ್ರಯಾಣಿಕರ ಆರೋಗ್ಯಕ್ಕೂ ಅಪಾಯವನ್ನುಂಟುಮಾಡುತ್ತದೆ. ಬೆಂಗಳೂರು ಮೆಟ್ರೋ ನಿಗಮ ನಿಯಮಿತ ಸ್ವಚ್ಛ ಆರೋಗ್ಯಕರ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಯಾಗಾಗಿ ಬದ್ಧವಾಗಿದೆ ಎಂದು ತಿಳಿಸಿದೆ.