ಬೆಂಗಳೂರು : ರಾಜ್ಯ ಸರ್ಕಾರ ಅರಣ್ಯ ಪಾಲಕ ಗ್ರೂಪ್-ಸಿ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದು, ಅರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ FEE/203 FEG 2015 ದಿನಾಂಕ 06.08.2019ರ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2019ರ ಅನ್ವಯ ಕೊಡಗು ವೃತ್ತಕ್ಕೆ ಸಂಬಂಧಿಸಿದಂತೆ ಅಧಿಸೂಚಿಸಲಾದ 33 ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ ”ಅರಣ್ಯ ರಕ್ಷಕ” ಗ್ರೂಪ್ ‘ಸಿ’ ಹುದ್ದೆಗಳಿಗೆ ನೇರ ನೇಮಕಾತಿ ನಿಯಮ ಹಾಗೂ ಅಧಿಸೂಚನೆಯಲ್ಲಿನ ಷರತ್ತುಗಳನ್ನಯ ದೈಹಿಕ ತಾಳ್ವಿಕೆ ಪರೀಕ್ಷೆ (Physical Endurance Test) ದೈಹಿಕ (Physical Efficiency Test) (Physical Standard Test) ಗಳಿಗೆ ಮೆರಿಟ್ ಹಾಗೂ ನೇರ ಮತ್ತು ಸಮತಳ ಬಿಂದುಗಳ ಅನುಸಾರ ಅರ್ಹತೆ ಪಡೆದ ಅಭ್ಯರ್ಥಿಗಳ 1:20 (ಹುದ್ದೆ ಅಭ್ಯರ್ಥಿ) ಅಂತಿಮ ಅರ್ಹತಾ ಪಟ್ಟಿಯನ್ನು ಅನುಬಂಧ-1 ರಲ್ಲಿ ಇಲಾಖೆಯ ಅಂತರ್ಜಾಲ https://aranya.gov.in ನಲ್ಲಿ ನೇಮಕಾತಿ (Requirement) ಶೀರ್ಷಿಕೆಯಡಿ ದಿನಾಂಕ 07.08.2024 ರಂದು ಪ್ರಕಟಣೆಯನ್ನು ಪ್ರಕಟಿಸಲಾಗಿರುತ್ತದೆ.
ಅದರಂತೆ ಸದರಿ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ದಿನಾಂಕ : 16.04.2025 ರಿಂದ 17.04.2025 ರವರೆಗೆ ಕ್ರೀಡಾ ಪ್ರೌಢಶಾಲೆ ಕೂಡಿಗೆಯ ಸಿಂಥೆಟಿಕ್ಸ್ ಕ್ರೀಡಾಂಗಣ, ಕುಶಾಲನಗರ ಕೊಡಗು ಜಿಲ್ಲೆ ಇಲ್ಲಿ ದೈಹಿಕ ತಾಳ್ವಿಕೆ ಪರೀಕ್ಷೆ (Physical Endurance Test) ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ (Physical Efficiency Test) ಗಳನ್ನು ನಡೆಸಲಾಗಿರುತ್ತದೆ.
ಸದರಿ ದೈಹಿಕ ಅರ್ಹತಾ ಪರೀಕ್ಷೆಗಳಲ್ಲಿ ಒಟ್ಟು 328 ಅಭ್ಯರ್ಥಿಗಳು ಅರ್ಹರಾಗಿದ್ದು ಸದರಿ ಅಭ್ಯರ್ಥಿಗಳಿಗೆ ದಿನಾಂಕ : 17.04.2025 ರಿಂದ 23.04.2025 ರವರೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ದೇಹ ದಾರ್ಡ್ಯತೆ ಪರೀಕ್ಷೆ (Physical Standard Test) ಗಳನ್ನು ನಡೆಸಲಾಗಿದು ವೈದ್ಯಕೀಯ ಮಂಡಳಿಗಳು ಸಲ್ಲಿಸಿರುವ ವರದಿಯನುಸಾರ 292 ಅಭ್ಯರ್ಥಿಗಳು ಅರ್ಹರಾಗಿದ್ದು 27 ಅಭ್ಯರ್ಥಿಗಳು ಅನರ್ಹರಾಗಿದ್ದು 6 ಅಭ್ಯರ್ಥಿಗಳ ವರದಿಯನ್ನು ವೈದ್ಯಕೀಯ ಮಂಡಳಿಯಿಂದ ಸ್ಪಷ್ಟನೆ ಪಡೆಯುವ ಸಲುವಾಗಿ Withheld ಮಾಡಲಾಗಿದೆ. ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಏಳು ದಿನದೊಳಗಾಗಿ ಕೇವಲ ನೋಂದಾಯಿತ ಅಂಚೆ ಮೂಲಕ ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ. ಉಳಿದಂತೆ ಯಾವುದೇ ಮೂಲಗಳಿಂದ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ. ಲಿಖಿತ ಪರೀಕ್ಷೆಯ ದಿನಾಂಕವನ್ನು ಇಲಾಖಾ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.










