ಬಳ್ಳಾರಿ : ಜಿ.ಆರ್.ಟಿ.ಡಿ.ಸಿ ಬಳ್ಳಾರಿ ಸಂಸ್ಥೆಯಲ್ಲಿ 2025-26 ನೇ ಶೈಕ್ಷಣಿಕ ವರ್ಷದ ಪ್ರಥಮ ಬಿ.ಎಸ್ಸಿ (ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ) ವೃತ್ತಿಪರ ಪದವಿ ಕೋರ್ಸ್’ಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ಪದವಿ ಕೋರ್ಸ್ ಪ್ರವೇಶಾತಿಗೆ ಯಾವುದೇ ದ್ವಿತೀಯ ಪಿ.ಯು.ಸಿ (ಕಲೆ, ವಾಣಿಜ್ಯ, ವಿಜ್ಞಾನ, ಶಿಕ್ಷಣ ಮತ್ತು ಯಾವುದೇ ಡಿಪ್ಲೋಮಾ) ವಿಭಾಗದಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಅರ್ಹರಿರುತ್ತಾರೆ. ಜಿ.ಆರ್.ಟಿ.ಡಿ.ಸಿ ಬಳ್ಳಾರಿ ಸಂಸ್ಥೆಯು ರಾಜ್ಯ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ ಇದರ ಅಂಗ ಸಂಸ್ಥೆಯಾಗಿದೆ. ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಬೆಳಗಾವಿ ಮತ್ತು ಬೆಂಗಳೂರು ಇದರಡಿ 2009 ರಲ್ಲಿ ಪ್ರಾರಂಭವಾಗಿದ್ದು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾ ಕ್ರೀಡಾಂಗಣ ಮೈದಾನ ರಸ್ತೆಯ ಮೊದಲನೇಯ ರೈಲ್ವೆ ಗೇಟ್ ಹತ್ತಿರದ ನಲ್ಲಚೇರುವು ಪ್ರದೇಶದ ಜಿ.ಆರ್.ಟಿ.ಡಿ.ಸಿ ಕಾಲೇಜ್ ನ ಪ್ರಾಂಶುಪಾಲರ ಕಚೇರಿ ಅಥವಾ ಬೋಧಕ ಸಿಬ್ಬಂದಿಗಳ ಮೊ.9741264655, 9844862576, 9844474235, 8123126127 ಗೆ ಸಂಪರ್ಕಿಸಬಹುದು ಎಂದು ಜಿಆರ್ಟಿಡಿಸಿ ಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.