ಬೆಂಗಳೂರು : 100 ಕುರಿ ಎಣಿಸಲು ಬರದವನು ಬಜೆಟ್ ಮಂಡಿಸ್ತಾನಾ” ಎಂದು ಅಣುಕಿಸಿದ್ದರು , ಈಗ ನಾನು 16 ಬಜೆಟ್ ಮಂಡಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ನಾನು ಹಣಕಾಸು ಸಚಿವನಾಗಿ ಮೊದಲ ಬಜೆಟ್ ಮಂಡಿಸುವಾಗ “ನೂರು ಕುರಿ ಎಣಿಸಲು ಬರದವನು ಬಜೆಟ್ ಮಂಡಿಸ್ತಾನಾ” ಎಂದು ಅಣುಕಿಸಿದ್ದರು. ಈಗ ನಾನು 16 ಬಜೆಟ್ ಮಂಡಿಸಿದ್ದೇನೆ. ಆದ್ದರಿಂದ ಅವಕಾಶ ಮುಖ್ಯ. ಅವಕಾಶ ಸಿಕ್ಕಾಗ ಎಲ್ಲರ ಪ್ರತಿಭೆ ಹೊರಗೆ ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜನರ ಸೇವೆಯೇ ದೇವರ ಸೇವೆ ಎಂದು ನಂಬಿದವನು ನಾನು. ಬಸವಣ್ಣನವರು ಇದನ್ನೇ “ದೇಹವೇ ದೇಗುಲ” ಎಂದು ಹಾಡಿದರು. ದೇವರು ಮತ್ತು ಜನರ ನಡುವೆ ಮಧ್ಯವರ್ತಿ ಇರಬಾರದು ಎನ್ನುವುದು ಬಸವಣ್ಣನವರ ಮೌಲ್ಯವಾಗಿತ್ತು ಎಂದಿದ್ದಾರೆ. ದೇವರು ಇದ್ದಾನೆ. ನಾವು ಒಳ್ಳೆಯದನ್ನು ಮಾಡಿದರಷ್ಟೇ ದೇವರು ಸಹಾಯ ಮಾಡುತ್ತಾನೆ. ಅಮಾನವೀಯತೆಯಿಂದ ನಡೆದುಕೊಳ್ಳುವವರಿಗೆ ಯಾವ ದೇವರೂ ಸಹಾಯ ಮಾಡುವುದಿಲ್ಲ ಎಂದಿದ್ದಾರೆ.
12,000 ಕ್ಕೂ ಅಧಿಕ ಪೌರ ಕಾರ್ಮಿಕರ ಸೇವೆ ಕಾಯಂ
ಬೆಂಗಳೂರಿನಲ್ಲಿ ನಡೆದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಬಿಎಂಪಿಯ ಒಟ್ಟು 12,000 ಕ್ಕೂ ಅಧಿಕ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿ ನೇಮಕಾತಿ ಆದೇಶಪತ್ರ ನೀಡಲಾಗಿದೆ. ಇನ್ನು ಮುಂದೆ ಈ ಪೌರ ಕಾರ್ಮಿಕರ ಮಾಸಿಕ ವೇತನ ₹39,000 ಅವರ ಖಾತೆಗಳಿಗೆ ಜಮೆಯಾಗಲಿದೆ.ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿಯ ಜೊತೆಗೆ ಉದ್ಯೋಗ ಭದ್ರತೆಯನ್ನು ಒದಗಿಸಿ, ಚುನಾವಣೆಯ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದಿದ್ದಾರೆ.
ನಾನು ಹಣಕಾಸು ಸಚಿವನಾಗಿ ಮೊದಲ ಬಜೆಟ್ ಮಂಡಿಸುವಾಗ "ನೂರು ಕುರಿ ಎಣಿಸಲು ಬರದವನು ಬಜೆಟ್ ಮಂಡಿಸ್ತಾನಾ" ಎಂದು ಅಣುಕಿಸಿದ್ದರು. ಈಗ ನಾನು 16 ಬಜೆಟ್ ಮಂಡಿಸಿದ್ದೇನೆ. ಆದ್ದರಿಂದ ಅವಕಾಶ ಮುಖ್ಯ. ಅವಕಾಶ ಸಿಕ್ಕಾಗ ಎಲ್ಲರ ಪ್ರತಿಭೆ ಹೊರಗೆ ಬರುತ್ತದೆ. pic.twitter.com/LwKJkupxIM
— Siddaramaiah (@siddaramaiah) May 2, 2025