ಬೆಂಗಳೂರು : ಕರ್ನಾಟಕದ ‘ಎಸ್ಎಸ್ಎಲ್ಸಿ’ ಫಲಿತಾಂಶ ಪ್ರಕಟವಾಗಿದ್ದು, ಅಧಿಕೃತ ವೆಬ್ಸೈಟ್ ಮೂಲಕ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ವಿವರ ಭರ್ತಿ ಮಾಡಿ ವಿದ್ಯಾರ್ಥಿಗಳು ಅಂಕಗಳನ್ನು ಪರಿಶೀಲಿಸಬಹುದಾಗಿದೆ.
ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಟಿ ನಡೆಸುವ ಮೂಲಕ ಎಸ್ಎಸ್ಎಲ್ಸಿ’ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ವಿದ್ಯಾರ್ಥಿಗಳು ಫಲಿತಾಂಶಗಳನ್ನು 12.30 ರ ನಂತರ kseab.karnataka.gov.in ಅಥವಾ karresults.nic.in ನಲ್ಲಿ ಪರಿಶೀಲಿಸಬಹುದು. ಈ ಬಾರಿ 66.14 %ರಷ್ಟು ಫಲಿತಾಂಶ ಬಂದಿದೆ. ಈ ಬಾರಿ 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದರೆ , ಉಡುಪಿ ಜಿಲ್ಲೆ ದ್ವಿತೀಯ ಹಾಗೂ ಕಲಬುರಗಿ ಜಿಲ್ಲೆ ಕೊನೆ ಸ್ಥಾನ ಪಡೆದಿದೆ.
ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿದ್ದು, 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾಡಿದಂತೆಯೇ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೂ ಈ ವರ್ಷ ಇನ್ನೆರಡು ಪರೀಕ್ಷೆಯ ಅವಕಾಶ ನೀಡಲಾಗುತ್ತಿದೆ. ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕ ಲಭಿಸದಿದ್ದರೆ ವಿದ್ಯಾರ್ಥಿಗಳು ಇನ್ನು ಎರಡು ಬಾರಿ ಪರೀಕ್ಷೆ ಬರೆಯಬಹುದಾಗಿದೆ.