ತುಮಕೂರು: ತುಮಕೂರು ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಕಾರ್ಮಿಕರ ಶೆಡ್ ನಲ್ಲಿ 4 ಅಡಿ ಉದ್ದದ ಕೊಳಕುಮಂಡಲ ಮತ್ತು 43 ಮರಿಗಳು ಪತ್ತೆಯಾಗಿವೆ.
ಮಹಾಲಕ್ಷ್ಮಿ ಬಡಾವಣೆಯ ಶಿವಣ್ಣ ಟೈರ್ಸ್ ಮಾಲೀಕ ಕಾರ್ತಿಕ್ ಅವರ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಹಾವುಗಳು ಪತ್ತೆಯಾಗಿವೆ. ಮಾಹಿತಿ ತಿಳಿದ ುರಗ ರಕ್ಷಕರಾದ ಚಂದನ್, ಮನು ಅಗ್ನಿವಂಶಿ ಮತ್ತು ಕಾರ್ತಿಕ್ ಸಿಂಗ್ ಅವರು ಸ್ಥಳಕ್ಕೆ ತೆರಳಿ ಸುರಕ್ಷಿತವಾಗಿ ಹಾವಿನ ಮರಿಗಳನ್ನು ರಕ್ಷಿಸಿ. ದೇವರಾಯನ ದುರ್ಗಾ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಕೊಳಕುಮಂಡಲ ಹಾವುಗಳ ದೇಹದೊಳಗೆ ಮೊಟ್ಟೆಗಳು ಬೆಳೆದು ಹೊಟ್ಟೆ ಒಳಗಿನಿಂದಲೇ ಜೀವಂತ ಮರಿಗಳು ಹೊರ ಬರುತ್ತವೆ. ಕೊಳಕುಮಂಡಲ ಹಾವುಗಳು ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ನಲ್ಲಿ ಮಿಲನಗೊಂಡು ಪೂರ್ವ ಮುಂಗಾರು ಸಮಯದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಈ ಹಾವುಗಳು ಕಚ್ಚಿದ ಭಾಗ ಕೊಳೆಯುತ್ತದೆ ಎಂದು ಹೇಳಲಾಗಿದೆ.