ಬೆಂಗಳೂರು: ಇಂದಿನಿಂದ ರಾಜ್ಯದ ವಾಹನ ಮಾಲೀಕರಿಗೆ ತೆರಿಗೆ ಬಿಸಿ ತಟ್ಟಲಿದೆ. ಟ್ಯಾಕ್ಸಿ ಮತ್ತು ಲಘು ಗೂಡ್ಸ್ ವಾಹನಗಳು ದುಬಾರಿಯಾಗಲಿವೆ.
10 ಲಕ್ಷದೊಳಗಿನ ವಾಣಿಜ್ಯ ವಾಹನಗಳ ತೆರಿಗೆಯಲ್ಲೂ ಏರಿಕೆಯಾಗಿದೆ. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ ಹಿನ್ನೆಲೆಯಲ್ಲಿ ಇಂದಿನಿಂದ ತೆರಿಗೆ ಬಿಸಿ ತಟ್ಟಲಿದೆ. ವಾಹನಗಳ ಜೀವಿತಾವಧಿ ತೆರಿಗೆ ಇಂದಿನಿಂದ ಹೆಚ್ಚಳವಾಗಲಿದೆ.
10 ಲಕ್ಷ ರೂಪಾಯಿ ಒಳಗಿನ ಟ್ಯಾಕ್ಸಿ, ಲಘು ಗುರುವಾಹನಗಳ ತೆರಿಗೆ ಏರಿಕೆಯಾಗಲಿದೆ. ವಾಹನಗಳ ಜೀವಿತಾವಧಿ ತೆರಿಗೆ ಶೇ. 5ರಷ್ಟು ಹೆಚ್ಚಳವಾಗಲಿದೆ. ವಾಣಿಜ್ಯ ಉದ್ದೇಶ ಬಳಕೆಯ ಎಲೆಕ್ಟ್ರಿಕ್ ವಾಹನಗಳ ತೆರಿಗೆಯೂ ಏರಿಕೆಯಾಗಲಿದೆ. 25 ಲಕ್ಷಕ್ಕೂ ಹೆಚ್ಚಿನ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡಾ 10 ರಷ್ಟು ತೆರಿಗೆ ವಿಧಿಸಲಾಗುವುದು. ಇದುವರೆಗೆ 10 ಲಕ್ಷ ರೂಪಾಯಿಗಿಂತ ಕಡಿಮೆ ಮೌಲ್ಯದ ವಾಹನಗಳಿಗೆ ತೆರಿಗೆ ಇರಲಿಲ್ಲ. ಇಂದಿನಿಂದ ಈ ಎಲ್ಲಾ ವಾಹನಗಳ ಜೀವಿತಾವಧಿ ತೆರಿಗೆ ಏರಿಕೆಯಾಗಲಿದೆ.