ರಾತ್ರಿಯ ಊಟ ದಿನದ ಪ್ರಮುಖ ಆಹಾರವಾಗಿದೆ. ಉತ್ತಮ ನಿದ್ರೆ, ಸುಲಭ ಜೀರ್ಣಕ್ರಿಯೆ ಮತ್ತು ಸ್ಥಿರವಾದ ರಕ್ತದ ಸಕ್ಕರೆ ಮಟ್ಟಕ್ಕೆ ಇದು ಮುಖ್ಯ. ಆದರೆ ಕೆಲವೊಮ್ಮೆ ನಾವು ರಾತ್ರಿ ಊಟದ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ಶ್ವೇತಾ ಶಾ. ಯೂಟ್ಯೂಬ್ ವಿಡಿಯೋವೊಂದರಲ್ಲಿ ಅವರು ರಾತ್ರಿ ಊಟಕ್ಕೆ ಸೇವಿಸಬಾರದ ಮೂರು ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
- ಸಲಾಡ್ (Salad) ಬೇಡ: ಅನೇಕರು ರಾತ್ರಿ ಊಟಕ್ಕೆ ಸಲಾಡ್ ತಿನ್ನುತ್ತಾರೆ. ಆದರೆ ಅದರಲ್ಲಿರುವ ಹೂಕೋಸು, ಬ್ರೊಕೊಲಿ (Broccoli) ಮತ್ತು ಎಲೆಕೋಸು ಜೀರ್ಣಿಸಿಕೊಳ್ಳಲು ಕಷ್ಟವಾಗಿದ್ದು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು.
- ಹಣ್ಣುಗಳು ಬೇಡ: ಹಣ್ಣುಗಳಲ್ಲಿರುವ ಸಕ್ರಿಯ ಕಿಣ್ವಗಳು ನಿಮ್ಮನ್ನು ಎಚ್ಚರವಾಗಿರಿಸಬಹುದು. ಅಲ್ಲದೆ, ರಾತ್ರಿ ಹಣ್ಣು ತಿಂದರೆ ಅದರಲ್ಲಿರುವ ಸಕ್ಕರೆ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಹಾಗಾಗಿ ಸಂಜೆ 5 ಗಂಟೆಯ ನಂತರ ಹಣ್ಣು ತಿನ್ನುವುದನ್ನು ತಪ್ಪಿಸುವುದು ಉತ್ತಮ.
- ಪಿಷ್ಟಭರಿತ ಆಹಾರ ಬೇಡ: ಪಿಜ್ಜಾ (Pizza) ಮತ್ತು ಪಾಸ್ತಾದಂತಹ (Pasta) ಆಹಾರಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ. ರಾತ್ರಿ ಊಟ ಹಗುರವಾಗಿರಬೇಕು. ಖಿಚಡಿ (Khichdi) ಅಥವಾ ಹುರುಳಿ ಕಾಳಿನ ಸಾರು ರಾತ್ರಿ ಊಟಕ್ಕೆ ಉತ್ತಮ ಆಯ್ಕೆ ಎಂದು ಅವರು ಹೇಳಿದ್ದಾರೆ.
ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ರಾತ್ರಿ ಊಟದ ಬಗ್ಗೆ ಗಮನ ಕೊಡುವುದು ಮುಖ್ಯ.