ಆಂಧ್ರಪ್ರದೇಶ : ಚಕ್ರಕ್ಕೆ ದುಪ್ಪಟ್ಟಾ ಸಿಲುಕಿ ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಅನಕಪಲ್ಲಿಯ ಅಚ್ಯುತಪುರಂನಲ್ಲಿ ನಡೆದಿದೆ.
ಮೃತರನ್ನು ಪೂರ್ವ ಗೋದಾವರಿ ಜಿಲ್ಲೆಯ ಕೇಸನಕುರ್ರು ನಿವಾಸಿ ರಾಮದುರ್ಗ (28) ಎಂದು ಗುರುತಿಸಲಾಗಿದೆ. ಈಕೆ ಒಂಬತ್ತು ತಿಂಗಳ ಹಿಂದೆ ಪೋಲವರಂ ನಿವಾಸಿ ಮೋಹನ್ ಕೃಷ್ಣ ಅವರನ್ನು ವಿವಾಹವಾಗಿದ್ದರು.
ಅವರು ಪತಿ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಾಮದುರ್ಗ ಧರಿಸಿದ್ದ ಸ್ಕಾರ್ಫ್ ಬೈಕ್ ಹಿಂಬದಿಯ ಚಕ್ರಕ್ಕೆ ಸಿಲುಕಿ ಆಕೆಯ ಕುತ್ತಿಗೆ ಅಡಿ ಆಗಿ ಬಿದ್ದಿದ್ದಾಳೆ. ಸ್ಥಳೀಯರ ಸಹಾಯದಿಂದ, ಪತಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಅವಳು ಈಗಾಗಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ದೃಢಪಡಿಸಿದರು.
TAGGED:ಮಹಿಳೆ ದಾರುಣ ಸಾವು