ಇಲ್ಲಿದೆ ʼಟೊಮೆಟೊ ಬಾತ್ʼ ಮಾಡುವ ಸುಲಭ ವಿಧಾನ !

ರುಚಿಕರವಾದ ಮತ್ತು ಖಾರವಾದ ಅನ್ನದ ಖಾದ್ಯವೇ ಟೊಮೆಟೊ ಬಾತ್ ಇದನ್ನು ಟೊಮೆಟೊ ಮತ್ತು ತೆಂಗಿನಕಾಯಿ ಹಾಲಿನಲ್ಲಿ ಅನ್ನವನ್ನು ಬೇಯಿಸಿ ಮಾಡಲಾಗುತ್ತದೆ. ಪುದೀನ ಮತ್ತು ಹೋಳು ಮಸಾಲೆಗಳ ಸುವಾಸನೆಯಿಂದ ಇದು ಇನ್ನಷ್ಟು ರುಚಿಕರವಾಗಿರುತ್ತದೆ.

ಬಿಡುವಿಲ್ಲದ ದಿನಗಳಲ್ಲಿ ಅಥವಾ ಬೇಗನೆ ಏನಾದರೂ ರುಚಿಕರವಾಗಿ ತಿನ್ನಬೇಕೆನಿಸಿದಾಗ ಈ ಒಂದು ಪಾತ್ರೆಯ ಊಟ ಹೇಳಿ ಮಾಡಿಸಿದಂತಿದೆ. ಇದಕ್ಕೆ ಹೆಚ್ಚುವರಿಯಾಗಿ ಯಾವುದೇ ಸೈಡ್ ಡಿಶ್ ಬೇಕಾಗಿಲ್ಲ. ಇದರ ರುಚಿಗಾಗಿ ಒಂದು ವಿಶೇಷವಾದ ಮಸಾಲೆ ಪೇಸ್ಟ್ ಅನ್ನು ರುಬ್ಬಿಕೊಳ್ಳಬೇಕಾಗುತ್ತದೆ. ಈ ಪಾಕವಿಧಾನದಲ್ಲಿ ಬಾಸುಮತಿ ಅಕ್ಕಿಯ ಬದಲು ಯಾವುದೇ ಸಣ್ಣ ಕಾಳಿನ ಅಕ್ಕಿಯನ್ನು ಬಳಸಿದರೆ ರುಚಿ ಇನ್ನಷ್ಟು ವಿಭಿನ್ನವಾಗಿರುತ್ತದೆ. ಬನ್ನಿ, ಟೊಮೆಟೊ ಬಾತ್ ಮಾಡುವುದು ಹೇಗೆಂದು ನೋಡೋಣ!

ಬೇಕಾಗುವ ಸಾಮಗ್ರಿಗಳು:

  • ಅಕ್ಕಿ – 1 ½ ಕಪ್
  • ಟೊಮೆಟೊ (Tomato) – 3
  • ಈರುಳ್ಳಿ – 1
  • ಪುದೀನ (Pudina) – ¼ ಕಪ್
  • ಜೀರಿಗೆ – ¼ ಟೀಸ್ಪೂನ್
  • ಪಲಾವ್‌ ಎಲೆ (Bay Leaf) – 1
  • ಚಕ್ರಮೊಗ್ಗು – ¼
  • ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
  • ಅರಿಶಿನ ಪುಡಿ – ¼ ಟೀ ಸ್ಪೂನ್
  • ಕೊತ್ತಂಬರಿ ಪುಡಿ – ½ ಟೀಸ್ಪೂನ್
  • ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ – 1 ಟೇಬಲ್ ಸ್ಪೂನ್

ರುಬ್ಬಿಕೊಳ್ಳಲು:

  • ತುರಿದ ತೆಂಗಿನಕಾಯಿ (Turida Tenginakayi) – 3 ಟೇಬಲ್ ಸ್ಪೂನ್
  • ಹಸಿ ಮೆಣಸಿನಕಾಯಿ – 2
  • ಚಕ್ಕೆ – ¼ ಇಂಚು
  • ಲವಂಗ – 1

ಮಾಡುವ ವಿಧಾನ:

  1. ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು 10-20 ನಿಮಿಷಗಳ ಕಾಲ ನೆನೆಸಿಡಿ.
  2. ಬ್ಲೆಂಡರ್‌ನಲ್ಲಿ ತುರಿದ ತೆಂಗಿನಕಾಯಿ, ಹಸಿ ಮೆಣಸಿನಕಾಯಿ, ಚಕ್ಕೆ ಮತ್ತು ಲವಂಗ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
  3. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ, ಪಲಾವ್‌ ಎಲೆ ಮತ್ತು ಚಕ್ರಮೊಗ್ಗು ಹಾಕಿ. ಸುವಾಸನೆ ಬಂದ ನಂತರ ಪುದೀನ ಮತ್ತು ತೆಳುವಾಗಿ ಕತ್ತರಿಸಿದ ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ.
  4. ಈರುಳ್ಳಿ ಪಾರದರ್ಶಕವಾದ ನಂತರ ಕತ್ತರಿಸಿದ ಟೊಮೆಟೊ, ಉಪ್ಪು, ಅರಿಶಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ ಟೊಮೆಟೊ ಬೇಯುವವರೆಗೆ ಬಿಡಿ.
  5. ಟೊಮೆಟೊ ಬೆಂದ ನಂತರ ರುಬ್ಬಿದ ತೆಂಗಿನಕಾಯಿ ಪೇಸ್ಟ್ ಸೇರಿಸಿ ಚೆನ್ನಾಗಿ ಕಲಸಿ.
  6. ನೆನೆಸಿದ ಅಕ್ಕಿ ಮತ್ತು ನೀರು ಸೇರಿಸಿ ಉಪ್ಪು ಸರಿ ಇದೆಯಾ ಎಂದು ಪರೀಕ್ಷಿಸಿ.
  7. ಈ ಮಿಶ್ರಣವನ್ನು ರೈಸ್ ಕುಕ್ಕರ್‌ಗೆ (Rice Cooker) ಹಾಕಿ ಅನ್ನ ಬೇಯುವವರೆಗೆ ಬೇಯಿಸಿ. (ಕುಕ್ಕರ್‌ನಲ್ಲಿ ಮಾಡಿದರೆ 3 ವಿಷಲ್ ಬರುವವರೆಗೆ ಬೇಯಿಸಿ).
  8. ಅನ್ನ ಬೆಂದ ನಂತರ 5 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಸೌಟಿನಿಂದ ನಿಧಾನವಾಗಿ ಕಲಕಿ ಬಿಸಿಬಿಸಿಯಾಗಿ ಬಡಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read