ಡಿಜಿಟಲ್ ಡೆಸ್ಕ್ : ಕರ್ನಾಟಕ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಹಬ್ಬ ಮತ್ತು ರಜಾ ದಿನಗಳ) ಕಾಯ್ದೆ 1963ರ ಕಲಂ 3 ಹಾಗೂ ಕರ್ನಾಟಕ ನಿಯಮಗಳು 1964ರ ನಿಯಮ 9ರ ಮೇರೆಗೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಹೋಟೆಲ್, ರೆಸ್ಟೋರೆಂಟ್ಗಳು, ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳು ಮೇ 01ರಂದು ಕಾರ್ಮಿಕ ದಿನಾಚರಣೆಯ ದಿನದಂದು ತಮ್ಮಲ್ಲಿ ಕೆಲಸ ಮಾಡುವ ಎಲ್ಲಾ ನೌಕರರಿಗೆ ವೇತನ ಸಹಿತ ರಜೆಯನ್ನು ನೀಡುವುದು.
ಕಾರ್ಮಿಕ ದಿನಾಚರಣೆ ದಿನದಂದು ಕಾರ್ಮಿಕರ ಒಪ್ಪಿಗೆಯನ್ನು ಪಡೆದು ಆ ಕಾರ್ಮಿಕರು ಕೆಲಸ ನಿರ್ವಹಿಸಿದ್ದಲ್ಲಿ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ದುಪ್ಪಟ್ಟು ವೇತನ ನೀಡಲು ಸೂಚಿಸಿದೆ. ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಸಂಸ್ಥೆ, ನಿಯೋಜಕರ ವಿರುದ್ಧ ನಿಯಾಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚಿತ್ರದುರ್ಗ ಕಾರ್ಮಿಕ ಅಧಿಕಾರಿ ಅನಿಲ್ ಬಿ ಬಗಟಿ ತಿಳಿಸಿದ್ದಾರೆ.
You Might Also Like
TAGGED:ಕಾರ್ಮಿಕರ ದಿನಾಚರಣೆ