ಗ್ರಾಹಕರಿಗೆ ಗುಡ್ ನ್ಯೂಸ್: ಪನೀರ್ ಬಳಕೆಗೆ ಮಾರ್ಗಸೂಚಿ ಜಾರಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಚಿಂತನೆ

ನವದೆಹಲಿ: ಹೋಟೆಲ್ ಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಊಟ, ತಿನಿಸುಗಳಲ್ಲಿ ಅನಲಾಗ್ ಪನೀರ್ ಬಳಕೆ ಮಾಡಿದ್ದರೆ ಅದನ್ನು ಹೋಟೆಲ್ ಗಳು ಸ್ಪಷ್ಟವಾಗಿ ನಮೂದಿಸಬೇಕು ಎಂಬುದನ್ನು ಕಡ್ಡಾಯಗೊಳಿಸಲು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯ ಚಿಂತನೆ ನಡೆಸಿದೆ.

ಅನಲಾಗ್ ಪನೀರ್ ನ ಪ್ಯಾಕೆಟ್ ಮೇಲೆ ಉತ್ಪಾದಕರು ಡೈರಿಯೇತರ ಎಂಬುದಾಗಿ ನಮೂದಿಸುವುದನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಈಗಾಗಲೇ ಕಡ್ಡಾಯಗೊಳಿಸಿದ್ದು, ಈ ನಿಯಮ ಹೋಟೆಲ್ ಗಳಲ್ಲಿ ಬಡಿಸುವ ಸಿದ್ಧಪಡಿಸಿದ ಆಹಾರಕ್ಕೆ ಅನ್ವಯವಾಗುವುದಿಲ್ಲ.

ಅನಲಾಗ್ ಪನೀರ್ ಕೂಡ ನೋಡಲು ಮತ್ತು ರುಚಿಯಲ್ಲಿ ನೈಜ ಪನೀರ್ ಹೋಲುತ್ತದೆ. ದರ ಕಡಿಮೆಯಾಗಿದ್ದರಿಂದ ಹೋಟೆಲ್ ಗಳು ಗ್ರಾಹಕರ ಎದುರು ಇದನ್ನು ಬಹಿರಂಗಪಡಿಸುವುದಿಲ್ಲ. ಇನ್ನು ಮುಂದೆ ಅಡುಗೆಯಲ್ಲಿ ಅನಲಾಗ್ ಪನೀರ್ ಬಳಸಿರುವುದನ್ನು ಗ್ರಾಹಕರಿಗೆ ಮೊದಲೇ ತಿಳಿಸಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಗ್ರಾಹಕರ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.

ಸಿಂಥೆಟಿಕ್ ಅಥವಾ ನಕಲಿ ಪನೀರ್ ಎಂದು ಕರೆಯುವ ಅನಲಾಗ್ ಪನೀರನ್ನು ಸಸ್ಯಜನ್ಯ ಎಣ್ಣೆಗಳು, ಪಿಷ್ಟಗಳು, ಎಮಲ್ಸಿಫೈರ್ ನಂತಹ ಕಡಿಮೆ ದರದ ಡೈರಿಯೇತರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತಿದೆ. ಹಾಲಿನಿಂದ ತಯಾರಿಸಿದ ನೈಜ ಪನೀರ್ ಗೆ ಪರ್ಯಾಯವಾಗಿ ಇದನ್ನು ಬಳಕೆ ಮಾಡಲಾಗುವುದು. ಇದು ಕಡಿಮೆ ಪ್ರೋಟೀನ್, ಅನಾರೋಗ್ಯಕರ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ. ನೈಜ ಪನ್ನೀರ್ ನ ಅರ್ಧದಷ್ಟು ಬೆಲೆಯಲ್ಲಿ ಈ ಅನಲಾಗ್ ಪನೀರ್ ಸಿಗುತ್ತದೆ. ಕಡಿಮೆ ಗುಣಮಟ್ಟದ ಸಸ್ಯಜನ್ಯ ಎಣ್ಣೆ ಮತ್ತಿದರೆ ಪದಾರ್ಥ ಬಳಕೆ ಮಾಡಿ ಇದನ್ನು ತಯಾರಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read