ನವದೆಹಲಿ: ಜಮ್ಮು ಕಾಶ್ಮೀರದ ಬಹಲ್ ಗಾಮ್ ನಲ್ಲಿ ಇತ್ತೀಚೆಗೆ ದಾಳಿ ಮಾಡಿದ ಉಗ್ರರು ದಾಳಿಯ ಸಂದರ್ಭದಲ್ಲಿ ಭಾರತೀಯ ರಕ್ಷಣಾ ಪಡೆಗಳ ಕಣ್ತಪ್ಪಿಸಲು ಚೀನಾ ತಂತ್ರಜ್ಞಾನದ ಮೊರೆ ಹೋಗಿದ್ದ ವಿಚಾರ ಬೆಳಕಿಗೆ ಬಂದಿದೆ.
ಪಾಕಿಸ್ತಾನದಲ್ಲಿರುವ ತಮ್ಮ ಸೂತ್ರದಾರರ ಜೊತೆಗೆ ಸಂವಾದಕ್ಕೆ ಉಗ್ರರು ಚೀನಾ ಆ್ಯಪ್ ಮತ್ತು ಉಪಕರಣಗಳನ್ನು ಬಳಸಿರುವುದು ಎನ್ಐಎ ತನಿಖೆಯಲ್ಲಿ ಪತ್ತೆಯಾಗಿದೆ. ಆ್ಯಪ್ ಜೊತೆಗೆ ಚೀನಾದ ಸ್ಯಾಟಲೈಟ್ ಫೋನ್ ಗಳನ್ನು ಪಾಕಿಸ್ತಾನಿ ಭಯೋತ್ಪಾದಕರು ಬಳಸಿಕೊಂಡಿದ್ದಾರೆ.
ಭಾರತದ ಭದ್ರತಾ ಪಡೆಗಳ ಕಣ್ತಪ್ಪಿಸಲು ನಿಷೇಧಿತ ಚೀನಾ ತಂತ್ರಜ್ಞಾನಕ್ಕೆ ಉಗ್ರರು ಮೊರೆ ಹೋಗಿದ್ದಾರೆ. ಭಾರತದಲ್ಲಿ ಭಾಗಶಃ ನಿಷೇಧಕ್ಕೆ ಒಳಗಾಗಿರುವ ಚೀನಾದ ಹುವಾಯ್ ಕಂಪನಿಗಳ ಉತ್ಪನ್ನಗಳನ್ನು ಉಗ್ರರು ದಾಳಿಯ ಸಂದರ್ಭದಲ್ಲಿ ಬಳಸಿದ್ದಾರೆ ಎಂದು ಗೊತ್ತಾಗಿದೆ.