ಶ್ರೀನಗರ: ಭಾರತೀಯ ಸೇನೆಯಿಂದ ಹತ್ಯೆಯಾಗಿದ್ದ ಉಗ್ರನ ಬಳಿ ಪಾಕಿಸ್ತಾನದ ಐಡಿ ಕಾರ್ಡ್ ಪತ್ತೆಯಾಗಿದೆ. ಜಹೀರ್ ಅಹ್ಮದ್ ಅಬ್ಬಾಸಿ ಬಳಿ ಪಾಕ್ ಐಡಿ ಪತ್ತೆಯಾಗಿದೆ.
ಕುಪ್ವಾರದಲ್ಲಿ ಭಾರತೀಯ ಸೇನೆಯಿಂದ ಹತ್ಯೆಯಾಗಿದ್ದ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಯಾಗಿದ್ದ ಉಗ್ರ ಜಹೀರ್ ಅಹ್ಮದ್ ಅಬ್ಬಾಸಿ ಬಳಿ ಪಾಕಿಸ್ತಾನ ಐಡಿ ಪತ್ತೆಯಾಗಿದ್ದು, ಈ ಮೂಲಕ ಉಗ್ರರಿಗೆ ಪಾಕಿಸ್ತಾನ ನೆರವು ನೀಡುತ್ತಿರುವ ಬಗ್ಗೆ ಮತ್ತಷ್ಟು ಸಾಕ್ಷ್ಯ ಲಭ್ಯವಾಗಿದೆ.
ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯ ನಂತರ ಪಾಕಿಸ್ತಾನ ವಿರುದ್ಧ ರಾಜತಾಂತ್ರಿಕ ಕ್ರಮ ಸೇರಿ ಅನೇಕ ಕ್ರಮ ಕೈಗೊಂಡಿರುವ ಭಾರತ ಸರಿಯಾಗೇ ತಿರುಗೇಟು ನೀಡುತ್ತಿದೆ. ಉಗ್ರರನ್ನು ಸದೆಬಡಿಯಲು ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ.