BREAKING : ಬೆಂಗಳೂರಲ್ಲಿ ಮಂಗಳಮುಖಿ ‘ತನುಶ್ರೀ’ ಬರ್ಬರ ಹತ್ಯೆ ಕೇಸ್ :  ಮೂವರು ಆರೋಪಿಗಳು ಅರೆಸ್ಟ್.!

ಬೆಂಗಳೂರು : ಬೆಂಗಳೂರಲ್ಲಿ ಮಂಗಳಮುಖಿ ತನುಶ್ರೀ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಜಗದೀಶ್, ಪ್ರಭಾಕರ್, ಸುಶಾಂತ್ ಎಂದು ಗುರುತಿಸಲಾಗಿದೆ.ಬೆಂಗಳೂರಿನಲ್ಲಿ ಮಂಗಳ ತನುಶ್ರೀಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಆರ್.ಪುರಂ ನಲ್ಲಿ ನಡೆದಿತ್ತು.ತನುಶ್ರೀ ಕರವೇ ಕಾರ್ಯಕರ್ತೆ ಕೂಡ ಆಗಿದ್ದರು. ಅಲ್ಲದೇ ಸಂಗಮ ಎನ್ ಜಿಒ ನಡೆಸುತ್ತಿದ್ದರು. ಮೂರು ತಿಂಗಳ ಹಿಂದಷ್ಟೇ ಜಗನ್ನಾಥ ಎಂಬುವವರನ್ನು ವಿವಾಹವಾಗಿದ್ದರು.

ಹಣ ಮತ್ತು ಚಿನ್ನಾಭರಣಕ್ಕಾಗಿ ತನುಶ್ರೀಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ತನಿಖೆ ನಡೆಸಿದ ಬಳಿಕ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ. ಮಂಗಳಮುಖಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂನ ಬಸವೇಶ್ವರನಗರದ ಗಾಯತ್ರಿ ಲೇಔಟ್ನಲ್ಲಿ ನಡೆದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read