ಬೆಂಗಳೂರು: ಕೆಲ ದಿನಗಳ ಹಿಂದೆ ಕಾಲೇಜು ಪ್ರಾಧ್ಯಾಕ್ಷನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಬಲಿ ಜೆಹೆಚ್ ಬಿಸಿ ಬಳಿ ಕಾಅಲೇಜು ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಎಂಬುವವರ ಮೇಲೆ ಯುವಕರ ಗುಂಪು ಹಲ್ಲೆ ಅನ್ಡೆಸಿದ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುಪ್ರಸಾದ್, ಶರತ್, ಅಮೃತ್ ಕುಮಾರ್ ಬಂಧಿತ ಆರೋಪಿಗಳು. ಸದ್ಯ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಾಧ್ಯಾಪಕ ಅರಬಿಂದ್ ಗುಪ್ತಾಅ ಬೈಕ್ ನಲ್ಲಿ ತೆರಳುತ್ತಿದ್ದಾಗ ಮೂವರು ಯುವಕರು ಟೀ ಕುಡಿದು ಗ್ಲಾಸ್ ರಸ್ತೆಗೆ ಬಿಸಾಅಕಿದ್ದರು, ತಿಂಡಿ ತಿಂದು ಕಸವನ್ನು ರಸ್ತೆಗೆ ಎಸೆದಿದ್ದರು. ಅಲ್ಲದೇ ಆಟೋವನ್ನು ತಂಡು ಬೈಕ್ ಗೆ ಟಚ್ ಮಾಡುವ ರೀತಿಯಲ್ಲಿ ಓಡಿಸಿ ಭಯ ಹುಟ್ಟಿಸುತ್ತಿದ್ದರು. ಪ್ರಶ್ನೆ ಮಾಡಿದ್ದಕ್ಕೆ ಅರಬಿಂದ್ ಗುಪ್ತಾ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಅರಬಿಂದ್ ಗುಪ್ತಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಮಾಡಿ ನೋವು ಹಂಚಿಕೊಂಡಿದರು.