ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿಯ ಜುಗ್ಗಿ ಕ್ಲಸ್ಟರ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ, 800 ಗುಡಿಸಲುಗಳು ಸುಟ್ಟುಹೋಗಿವೆ.
ರೋಹಿಣಿಯ ಸೆಕ್ಟರ್ 17 ರಲ್ಲಿರುವ ಶ್ರೀ ನಿಕೇತನ ಅಪಾರ್ಟ್‌ಮೆಂಟ್ ಬಳಿಯ ಜುಗ್ಗಿ ಕ್ಲಸ್ಟರ್‌ನಲ್ಲಿ ಭಾನುವಾರ ಸಂಭವಿಸಿದ ಭೀಕರ ಬೆಂಕಿಯಲ್ಲಿ ಕನಿಷ್ಠ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ದೆಹಲಿಯ ರೋಹಿಣಿ ಪ್ರದೇಶದಲ್ಲಿ ಇಂದು 800 ಕ್ಕೂ ಹೆಚ್ಚು ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದವರು ಸುಮಾರು ಮೂರು ಗಂಟೆಗಳ ಕಾಲ ನಿರಂತರ ಕೆಲಸ ಮಾಡಿದ ನಂತರ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು, ಆದರೆ ಕಾರ್ಯಾಚರಣೆಗಳು ಇನ್ನೂ ಸ್ಥಳದಲ್ಲಿ ನಡೆಯುತ್ತಿವೆ.
ಎರಡೂವರೆ ವರ್ಷ ಮತ್ತು ಮೂರು ವರ್ಷದ ಎರಡು ಮಕ್ಕಳ ಸುಟ್ಟ ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ(ರೋಹಿಣಿ) ಅಮಿತ್ ಗೋಯೆಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬೆಳಿಗ್ಗೆ 11:55 ರ ಸುಮಾರಿಗೆ ಅವರಿಗೆ ವಿಪತ್ತು ಕರೆ ಬಂದಿದ್ದು, 20 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Delhi | Two bodies have been recovered from the spot. A search and rescue operation is underway: Delhi Police https://t.co/iWD3ZPDwwW
— ANI (@ANI) April 27, 2025