ಹಾವೇರಿ: ಮಗುವಿನ ತೊಟ್ಟಿಲು ಶಾಅಸ್ತ್ರಕ್ಕೆ ತೆರಳುತ್ತಿದ್ದಾಗ ಟ್ರ್ಯಾಕ್ಟರ್ ನಿಂದ ಇದ್ದು ಇಬ್ಬರು ಸಾವನ್ನಪ್ಪಿರುವ ಘೋರ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನಿಟ್ಟೂರು ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಗೋಡಿಹಾಳ ಗ್ರಾಮದ ಅಶೋಕ್ ಸಿದ್ದಪ್ಪ ಮಾಗನೂರ (56) ಹಾಗೂ ಜಗದೀಶ್ ಸಿದ್ದಪ್ಪ (50) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ರಾಣೆಬೆನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಡಿಹಾಳ ಗ್ರಾಮದಿಂದ ಹರಿಹರಕ್ಕೆ ನಾಮಕರಣ ಶಾಸ್ತ್ರಕ್ಕೆ ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಟ್ರೇಲರ್ ಮಗುಚಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.