ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಲು ಪ್ಯಾನಲ್ ವಕೀಲರ ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೇ 07 ಅರ್ಜಿ ಸಲ್ಲಿಸಲು ಕೊನೆಯ ದಿನ.
ಆಸಕ್ತರು ತಮ್ಮ ವೈಯಕ್ತಿಕ ವಿವರಗಳೊಂದಿಗೆ ಸ್ವ ಹಸ್ತಾಕ್ಷರದಿಂದ ಭರ್ತಿ ಮಾಡಿದ ಅರ್ಜಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿತ್ರದುರ್ಗ ಅವರಿಗೆ ಸಲ್ಲಿಸಬಹುದಾಗಿರುತ್ತದೆ. ಅವಧಿ ಮುಗಿದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಚಿತ್ರದುರ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ಯಾನಲ್ ವಕೀಲರ ಅವಧಿಯು ಮುಕ್ತಾಯಗೊಳ್ಳುತ್ತಿದ್ದು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಹಾಗೂ ಮಾನ್ಯ ಕಾರ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ 03 ವರ್ಷಕ್ಕಿಂತ ಮೇಲ್ಪಟ್ಟು ವಕೀಲರ ವೃತ್ತಿಯಲ್ಲಿ ಅನುಭವ ಇರುವ ವಕೀಲರನ್ನು ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಕಾನೂನು ನೆರವು ನೀಡುವ ಪ್ರಕರಣಗಳಲ್ಲಿ ಹಾಜರಾಗಲು ಹಾಗೂ ಫ್ರಂಟ್ ಆಫೀಸ್ (ನ್ಯಾಯಾಲಯದ ಆವರಣ), ತಹಸೀಲ್ದಾರ್ ಕಛೇರಿ, ಸಿ.ಡಿ.ಪಿ ಕಛೇರಿ, ಕಾರಾಗೃಹ, ಬಾಲ ನ್ಯಾಯಮಂಡಳಿ, ಗ್ರಾಮೀಣ ಕಾನೂನು ನೆರವು ಮತ್ತು ಸಲಹಾ ಕೇಂದ್ರ, ಎ.ಆರ್.ಟಿ ಕೇಂದ್ರಗಳಲ್ಲಿನ ಕಾನೂನು ಸಲಹಾ ಕೇಂದ್ರಗಳಿಗೆ, “ಸಖಿ” ಕೇಂದ್ರಗಳಲ್ಲಿ ಕಾನೂನು ಸಲಹೆ ನೀಡಲು ಮತ್ತು ಕಾನೂನು ಸಾಕ್ಷರತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಲ್ಲಿ ಕಾರ್ಯ ನಿರ್ವಹಿಸಲು ಪ್ಯಾನಲ್ ವಕೀಲರುಗಳ ಆಯ್ಕೆ ಅವಶ್ಯಕವಾಗಿರುತ್ತದೆ.
ಪ್ಯಾನಲ್ ವಕೀಲರ ಆಯ್ಕೆ ಪ್ರಕ್ರಿಯೆಯು THE NATIONAL LEGAL SERVICES AUTHORITY (FREE AND COMPETENT LEGAL SERVICES) REGULATIONS, 2010 (As amended vide notification F.No. L/61/10/NALSA dated 28.08.2019 published in the Gazette of India on 06.09.2019) ರ ರೆಗ್ಯೂಲೇಷನ್ 8(2) ಮತ್ತು 10 (4) ಗೆ ಒಳಪಟ್ಟಿರುತ್ತದೆ ಮತ್ತು ಮೌಖಿಕ ಸಂದರ್ಶನದ ಮುಖಾಂತರ ಪ್ಯಾನಲ್ ವಕೀಲರನ್ನು ಆಯ್ಕೆ ಮಾಡಲಾಗುವುದು.
ಆದ್ದರಿಂದ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಪ್ಯಾನಲ್ ವಕೀಲರಾಗಿ ಕಾರ್ಯನಿರ್ವಹಿಸಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ನಿಗಧಿತ ಅರ್ಜಿ ನಮೂನೆಯಲ್ಲಿ ದಿನಾಂಕ 07/05/2025 ರಂದು ಸಂಜೆ 5.00 ಗಂಟೆಯೊಳಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಚಿತ್ರದುರ್ಗಲ್ಲಿ ಸಲ್ಲಿಸಲು ಕೋರಲಾಗಿದೆ. ಅಭ್ಯರ್ಥಿಗಳ ಆಯ್ಕೆ ಈ ಕೆಳಗಿನ ನಿಬಂಧನೆಗಳಿಗೆ ಒಳಗೊಂಡಂತೆ ಅರ್ಜಿಯನ್ನು ಕರೆಯಲಾಗಿದೆ.
ನಿಬಂಧನೆಗಳು: ವಕೀಲ ವೃತ್ತಿಯಲ್ಲಿ ಕನಿಷ್ಠ 3 ವರ್ಷಗಳ ಅನುಭವವಿರಬೇಕು. ಕರ್ನಾಟಕ ಬಾರ್ ಕೌನ್ಸಿಲ್ ನಿಂದ ನೊಂದಾವಣಿ ಆಗಿರಬೇಕು ಹಾಗೂ ಅದರ ಪ್ರಮಾಣಪತ್ರವನ್ನು ಲಗತ್ತಿಸಬೇಕು. ಕಾನೂನು ಸೇವೆಗಳ ಪ್ರಾಧಿಕಾರದ ನಿಯಮಗಳನ್ನು ತಿಳಿದಿರಬೇಕು. ವಕೀಲರುಗಳಿಗೆ ಪ್ರತ್ಯೇಕವಾದ ವಾಹನ ಭತ್ಯೆ ನೀಡಲಾಗುವುದಿಲ್ಲ. ಬೈಠಕ್ ಭತ್ಯೆ ಮಾತ್ರ ನೀಡಲಾಗುತ್ತದೆ. ವಕೀಲರ ಸಾಮಥ್ರ್ಯ, ಸಮಗ್ರತೆ, ಸೂಕ್ತತೆ ಮತ್ತು ಅನುಭವಗಳನ್ನು ಪರಿಗಣಿಸಲಾಗುತ್ತದೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ತಿಳಿಸಿದ್ದಾರೆ.