ನವದೆಹಲಿ : ಪಾಕಿಸ್ತಾನ ಪ್ರಜೆಗಳ ಎಲ್ಲಾ 17 ರೀತಿಯ ವೀಸಾ ರದ್ದುಗೊಳಿಸಿ ಕೇಂದ್ರ ಸರ್ಕಾರ ಖಡಕ್ ಆದೇಶ ಹೊರಡಿಸಿದೆ.
ಭಾರತದಲ್ಲಿರುವ ಎಲ್ಲಾ ಪಾಕ್ ಪ್ರಜೆಗಳ ವೀಸಾ ರದ್ದುಗೊಳಿಸಿ ವಾಪಸ್ ಕಳುಹಿಸಿ ಎಂದು ಎಲ್ಲಾ ರಾಜ್ಯದ ಸಿಎಂಗಳಿಗೆ ಕೇಂದ್ರ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದಾರೆ ಮತ್ತು ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸುವಂತೆ ಕೇಳಿಕೊಂಡಿದ್ದಾರೆ,
ಪಾಕ್ ಪ್ರಜೆಗಳ ವೀಸಾಗಳು ಭಾರತದಲ್ಲಿ ರದ್ದಾಗಿರುವುದರಿಂದ ಅವರನ್ನು ತಮ್ಮ ದೇಶಕ್ಕೆ ವಾಪಸ್ ಕಳುಹಿಸಬಹುದು. ಮೂಲಗಳ ಪ್ರಕಾರ, ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳ ಎಲ್ಲಾ ವೀಸಾಗಳನ್ನು ರದ್ದುಗೊಳಿಸಿದೆ.
Union Home Minister Amit Shah is speaking to all chief ministers on the issue, asking them to identify all Pakistan nationals in their respective states and take steps to ensure their prompt return to Pakistan: Sources pic.twitter.com/7MgHqkmRoe
— ANI (@ANI) April 25, 2025