ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 28 ಜನರು ಬಲಿಯಾಗಿದ್ದಾರೆ. ಪುರುಷರನ್ನೇ ಉಗ್ರರು ಹತ್ಯೆ ಮಾಡಿದ್ದಾರೆ. ಪತ್ನಿ-ಮಕ್ಕಳ ಕಣ್ಣೆದುರೇ ಭಯೋತ್ಪಾದಕರು ಗಂಡಂದಿರ ಪ್ರಾಣ ತೆಗೆದಿದ್ದಾರೆ. ಮದುವೆಯಾಗಿ ಒಂದೇ ವಾರದಲ್ಲಿ ಪತಿಯನು ಕಳೆದುಕೊಂಡ ದು:ಖದಲ್ಲಿದ್ದ ಮಹಿಳೆಗೆ ಗಂಡನ ಹತ್ಯೆಗೆ ಸಂಚು ರೂಪಿಸಿದ್ದು ಆಕೆಯೇ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಹಲ್ಘಾಮ್ ಉಗ್ರರ ದಾಳಿಯಲ್ಲಿ ಪತಿಯ ಹತ್ಯೆಗೆ ಪತ್ನಿಯೇ ಕಾರಣ ಎಂದು ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಓಸಫ್ ಖಾನ್ ಎಂಬಾತನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈತ ಜಬಲ್ಪುರದ ನಿವಾಸಿ ಎಂದು ತಿಳಿದುಬಂದಿದೆ.
ಮಹಿಳೆ ತನ್ನ ಗಂಡನನ್ನು ಕೊಲ್ಲಲು ಶೂಟರ್ ಗಳನ್ನು ನೇಮಿಸಿಕೊಂಡಿದ್ದಾಳೆ. ದಾಳಿ ನಡೆಯುವ ಒಂದು ವಾರದ ಮೊದಲು ಆಕೆ ಮದುವೆಯಾಗಿದ್ದಳು. ನಾವು ಬೇಲ್ಪುರಿ ತಿನ್ನುತ್ತಿದ್ದೆವು. ಬಂದೂಕುದಾರಿ ನನ್ನ ಪತಿ ಬಳಿ ಬಂದು ನೀನು ಹಿಂದುನಾ? ಮುಸ್ಲಿಮಾ? ಎಂದು ಕೇಳಿ ಹಿಂದೂ ಹೇಳುತ್ತಿದ್ದಂತೆ ಗುಂಡು ಹಾರಿಸಿದ್ದಾನೆ ಎಂದು ಕಣ್ಣೀರಿಟ್ಟಿದ್ದಾಳೆ. ಈ ಮಹಿಳೆಯನ್ನು ಮೊದಲು ತನಿಖೆ ನಡೆಸಬೇಕು ಎಂದು ವಿವಾದಾತ್ಮಕ ಪೋಸ್ಟ್ ಹಾಕಿದ್ದ.
ಯುವಕನ ಪೋಸ್ಟ್ ಗೆ ಸ್ಥಳೀಯ ನಿವಾಸಿ ಅಭಯ್ ಶ್ರೀವಾಸ್ತವ್ ಎಂಬುವವರು ಪೊಲೀಸರುಗೆ ದೂರು ನೀಡಿದ್ದರು. ಇದೀಗ ಯುವಕಓಸಫ್ ಖಾನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.