ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು 28 ಪ್ರವಾಸಿಗರು ಗುಂಡಿಟ್ಟು ಹತ್ಯೆ ಮಾಡಿ ಅಟ್ಟಹಾಸ ಮೆರೆದಿದೆ. ಇನ್ನೊಂದೆಡೆ ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ಚುರುಕುಗೊಳಿಸಿದೆ. ಈ ನಡುವೆ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಅಗ್ಳು, ಸಿಬ್ಬಂದಿಗಳಿಗೆ ದೇಶಬಿಟ್ಟು ತೆರಳುವಂತೆ ಕೇಂದ್ರ ಸರ್ಕಾರ ಖಡಕ್ ಸಂದೇಶ ರವಾನಿಸಿದೆ.
48 ಗಂಟೆಯೊಳಗೆ ಭಾರತದಲ್ಲಿರುವ ಪಾಕಿಸ್ತಾನಿಗಳು, ರಾಯಭಾರ ಕಚೇರಿಯ ಅಧಿಕಾರಿ, ಸಿಬ್ಬಂದಿಗಳು ಭಾರತ ಬಿಟ್ಟು ತೆರಳುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿರುವ ಪಾಕ್ ರಾಯಭಾರ ಕಚೇರಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.
ಪಾಕ್ ರಾಯಬಾರ ಕಚೇರಿಯ ಸಿಬ್ಬಂದಿಯೊಬ್ಬ ಬೃಹತ್ ಕೇಕ್ ನನ್ನು ಕಚೇರಿಗೆ ತಂದಿದ್ದು, ಸಿಬ್ಬಂದಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ಎಂದು ತಿಳಿದುಬಂದಿದೆ. ಪಾಕ್ ರಾಯಭಾರ ಕಚೇರಿ ಸಿಬ್ಬಂದಿ, ಅಧಿಕಾರಿಗಳ ವರ್ತನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ.
भारत ग़म में डूबा है, पाकिस्तान उच्चायोग में सेलिब्रेशन हो रहा है..केक मंगाया जा रहा है…#PahalgamTerroristAttack pic.twitter.com/KD0exSbBix
— Shivam Pratap Singh (@journalistspsc) April 24, 2025